ಕ್ರೈಂರಾಜ್ಯವೈರಲ್ ನ್ಯೂಸ್ಸಿನಿಮಾ

ದರ್ಶನ್ ಪ್ರಕರಣ: ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡಗೆ ಮೇಕ್ ಅಪ್ ಮಾಡಲು ಅನುಮತಿ ಕೊಟ್ಟ ಪೊಲೀಸ್..! ಎಸ್.ಐ ಗೆ ನೊಟೀಸ್ ಜಾರಿ ಮಾಡಿ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ..!

267

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಪವಿತ್ರಾ ಗೌಡಾಗೆ ಪೊಲೀಸ್ ಕಸ್ಟಡಿ ವೇಳೆ ಮೇಕ್ ಅಪ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿದ ಮಹಿಳಾ ಸಬ್-ಇನ್ಸ್ ಪೆಕ್ಟರ್ ಗೆ ಪೊಲೀಸ್ ಇಲಾಖೆ ನೊಟೀಸ್ ಜಾರಿ ಮಾಡಿದೆ.

ಜೂ.15 ರಂದು ಪವಿತ್ರಾ ಗೌಡ ಅವರನ್ನು ಸ್ಥಳ ಮಹಜರು ನಡೆಸಲು ಪೊಲೀಸ್ ಅಧಿಕಾರಿಗಳು ಆಕೆಯ ಮನೆಗೆ ಕರೆದೊಯ್ದಿದ್ದರು. ಮನೆಗೆ ಕರೆದೊಯ್ದ ವೇಳೆ ಪವಿತ್ರಾ ಗೌಡ ಮನೆಯಿಂದ ವಾಪಸ್ಸಾಗಬೇಕಾದರೆ ಲಿಪ್ ಸ್ಟಿಕ್ ಹಾಗೂ ಮೇಕಪ್ ಮಾಡಿಕೊಂಡು ನಗುತ್ತಾ ಹೊರಬರುತ್ತಿದ್ದದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು ಮತ್ತು ಭಾರಿ ಚರ್ಚೆಗೆ ಕಾರಣವಾಗಿತ್ತು. ಪವಿತ್ರಾ ಗೌಡಗೆ ಮೇಕಪ್ ಮಾಡಿಕೊಳ್ಳಲು ಅನುಮತಿ ನೀಡಿದ್ದರ ಕುರಿತು ಡಿಸಿಪಿ ಕಚೇರಿಯಿಂದ ಎಸ್‌ಐಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸ್ಪಷ್ಟನೆ ಕೇಳಲಾಗಿದೆ ಎಂದು ವರದಿ ತಿಳಿಸಿದೆ.

ಇದರ ಜೊತೆಗೆ ಜೈಲುವಾಸದಲ್ಲಿರುವ ದರ್ಶನ್ ಬಳಿಯಿದ್ದ ಎರಡು ಯುಎಸ್ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/06/darshan-2-us-made-gun-and-police-wrote-latter-for-surrender-kannada-news/
https://newsnotout.com/2024/06/ksrtc-govt-bus-ticket-price-hike-kannada-news-petrol-diesel-and-milk-price-also-increased/
https://newsnotout.com/2024/06/milk-price-hike-dcm-dk-shivakumar-statement-on-that-kannada-news/
See also  ಬಿಜೆಪಿಯಿಂದ ಇಬ್ಬರು ಶಾಸಕರು 6 ವರ್ಷಗಳ ಕಾಲ ಉಚ್ಚಾಟನೆ..! ನಿರ್ಧಾರವನ್ನು ಸ್ವಾಗತಿಸಿದ ಬಿ.ವೈ. ವಿಜಯೇಂದ್ರ‌..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget