ಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಹೈಕೋರ್ಟ್‌ ಮೊರೆ ಹೋದದ್ದೇಕೆ ನಟ ದರ್ಶನ್..? ದಾಸನಿಗೆ ವಾಂತಿ, ಭೇದಿ ಆಗುತ್ತಿದೆ ಎಂದ ವಕೀಲರು..!

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ (Darshan Thoogudeepa) ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಜೂನ್ 11 ರ ಮಂಗಳವಾರ ದರ್ಶನ್ ಬಂಧಿಸಲಾಗಿತ್ತು. ಪೊಲೀಸರ ವಿಚಾರಣೆ ಬಳಿಕ ನ್ಯಾಯಾಲಯ ಅವರನ್ನು ವಿಚಾರಣಾಧೀನ ಕೈದಿಯಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆ ಬಳಿಕ ಜುಲೈ 18 ರ ತನಕ ಆರೋಪಿ ದರ್ಶನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿತ್ತು. ಮಂಗಳವಾರ(ಜುಲೈ 9) ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಕೆ ಮಾಡಿದ್ದು, ಜೈಲು ಅಧಿಕಾರಿಗಳಿಗೆ ವಿವಿಧ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ನಟ ದರ್ಶನ್ ಪರ ವಕೀಲರು ಜೈಲಿನಲ್ಲಿ ಮನೆ ಊಟ ಮಾಡಲು ಅನುಮತಿ ನೀಡಬೇಕು, ಹಾಸಿಗೆ ನೀಡಬೇಕು, ಪುಸ್ತಕ ಓದಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ರಿಟ್ ಅರ್ಜಿ ಮಂಗಳವಾರ ಸಲ್ಲಿಕೆಯಾಗಿದ್ದು, ವಿಚಾರಣೆ ಇನ್ನೂ ನಡೆಯಬೇಕಿದೆ. ‘ಜೈಲಿನ ಊಟ ನಟ ದರ್ಶನ್‌ ಗೆ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ಮಾಡುತ್ತಿರುವುದರಿಂದ ಅವರಿಗೆ ವಾಂತಿ, ಭೇದಿ ಆಗುತ್ತಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಆದ್ದರಿಂದ ಮನೆಯ ಊಟ ಸೇವಿಸಲು ಅನುಮತಿ ನೀಡಬೇಕು’ ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ.

ದರ್ಶನ್ ಜೈಲಿನಲ್ಲಿ ಚಾಪೆ ಮೇಲೆ ಮಲಗುತ್ತಿದ್ದಾರೆ. ಆದ್ದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಅವರು ಮನೆಯಿಂದ ಹಾಸಿಗೆ ತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ರಿಟ್ ಅರ್ಜಿಯಲ್ಲಿ ವಿವರಣೆ ನೀಡಲಾಗಿದೆ.

Click 👇

https://newsnotout.com/2024/07/one8-commune-pub-virat-kohili-kannada-news-bengaluru-fir
https://newsnotout.com/2024/07/suryakumar-yadav-visited-marigudi-in-udupi-kaupu-cricketer
https://newsnotout.com/2024/07/mangaluru-theft-kannada-news-car-found-in-mulki-police-investigation
https://newsnotout.com/2024/07/russia-and-india-indians-are-free-from-russia-army-kannada-news-modi

Related posts

ತಡರಾತ್ರಿ RSS ಕಾರ್ಯಾಲಯಕ್ಕೆ ನುಗ್ಗಿ ಹಲವರನ್ನು ವಶಕ್ಕೆ ಪಡೆದ ಪೊಲೀಸರು..! ಈ ಬಗ್ಗೆ ಬಿಜೆಪಿ ಹೇಳಿದ್ದೇನು..?

ನೋಟಿಸ್‌ ಇಲ್ಲದೆಯೇ ರಾತ್ರಿ ರಹಸ್ಯವಾಗಿ ಲೋಕಾಯುಕ್ತ ಎಸ್‌.ಪಿ ಕಚೇರಿಗೆ ಭೇಟಿ ನೀಡಿದ ಸಿಎಂ ಬಾಮೈದ..! ಏನಿದು ದಿಢೀರ್ ಭೇಟಿ..?

ಕೊಡಗು: ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು, ಕಣ್ಣೀರಾದ ಕುಟುಂಬ