ಕರಾವಳಿಕ್ರೈಂದೇಶ-ವಿದೇಶಬೆಂಗಳೂರುರಾಜಕೀಯರಾಜ್ಯವೈರಲ್ ನ್ಯೂಸ್ಸಿನಿಮಾ

ದರ್ಶನ್ ನ ವಿಚಾರಣಾಧೀನ ಕೈದಿ ಸಂಖ್ಯೆ ಬದಲಾವಣೆ..! ಹಚ್ಚೆ ಹಾಕಿಸಿಕೊಂಡವರೆಲ್ಲಾ ಕಂಗಾಲು..! ಶೀಘ್ರದಲ್ಲೇ ದರ್ಶನ್ ಬಳ್ಳಾರಿಗೆ ಶಿಫ್ಟ್..!

251

ನ್ಯೂಸ್ ನಾಟೌಟ್: ಕೊಲೆ ಆರೋಪಿ ನಟ ದರ್ಶನ್​​ ನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್​ ಮಾಡಲು ನಿರ್ಧರಿಸಲಾಗಿದೆ. ಬಳ್ಳಾರಿಗೆ ಶಿಫ್ಟ್​ ಆಗುತ್ತಿದ್ದಂತೆ ವಿಚಾರಣಾಧೀನ ಕೈದಿ ಸಂಖ್ಯೆ ಬದಲಾವಣೆ ಮಾಡಲಿದ್ದಾರೆ.

ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ವಿಚಾರಣಾಧೀನ ಕೈದಿ ನಂ. 6106 ನೀಡಲಾಗಿತ್ತು. ಇದನ್ನು ಫ್ಯಾನ್ಸ್ ಸಂಭ್ರಮಿಸಿ ಹಚ್ಚೆ ಹಾಕಿಸಿಕೊಂಡಿದ್ದರು. ಕೆಲವರು ಕಾರುಗಳಿಗೆ ಈ ಸಂಖ್ಯೆಯನ್ನು ಬರೆದುಕೊಂಡಿದ್ದರು. ಈಗ ದರ್ಶನ್ ಫ್ಯಾನ್ಸ್ ಮತ್ತೆ ಪೇಚಿಗೆ ಸಿಲುಕಿಕೊಂಡಿದ್ದಾರೆ.
ಫ್ಯಾನ್ಸ್ ದರ್ಶನ್ ​ನ ಮೇಲೆ ಅಂಧಾಭಿಮಾನ ತೋರಿಸುತ್ತಿದ್ದಾರೆ. ಈ ಕಾರಣದಿಂದಲೇ ದರ್ಶನ್ ಜೊತೆ ಅನೇಕರು ಅರೆಸ್ಟ್ ಆಗಿದ್ದಾರೆ. ದರ್ಶನ್ ನ ಕೈದಿ ಸಂಖ್ಯೆಯನ್ನು ಕೆಲವರು ಹಚ್ಚೆ ಹಾಕಿಸಿಕೊಂಡರೆ ಇನ್ನೂ ಕೆಲವರು ತಮ್ಮ ವಾಹನಗಳಿಗೆ ಈ ನಂಬರ್​ನ ಸ್ಟಿಕ್ಕರ್ ಅಂಟಿಸಿದರು. ಅತ್ತ ಮಗನಿಗೆ ಕೈದಿ ಡ್ರೆಸ್ ಹಾಕಿಸಿ ಫೋಟೋಶೂಟ್ ಮಾಡಿಸೋ ಕೆಲಸವೂ ಆಯಿತು. ಈಗ ದರ್ಶನ್ ಫ್ಯಾನ್ಸ್ ಆರೋಪಿ ದರ್ಶನ್ ವಿಚಾರಣಾಧೀನ ಕೈದಿ ಸಂಖ್ಯೆ ಬದಲಾವಣೆ ಪಕ್ಕಾ ಆಗಿದೆ.

ಬಳ್ಳಾರಿಗೆ ಶಿಫ್ಟ್​ ಆಗುತ್ತಿದ್ದಂತೆ ವಿಚಾರಣಾಧೀನ ಕೈದಿ ಸಂಖ್ಯೆ ಚೇಂಜ್ ಆಗಲಿದೆ. ಬಳ್ಳಾರಿ ಕೈದಿಗಳಂತೆ ನಟ ದರ್ಶನ್‌ಗೂ ವಿಚಾರಣಾಧೀನ ಕೈದಿ ಸಂಖ್ಯೆ ಸಿಗಲಿದೆ. ಮೂರು ಅಂಕಿಯ ವಿಚಾರಣಾಧೀನ ನಂಬರ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೈಲಿನಲ್ಲಿ ಸಿಗರೇಟ್ ಸೇದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರನ್ನು ಇಂದು (ಆಗಸ್ಟ್​ 28) ವಿಚಾರಣೆ ಮಾಡಬೇಕಿದೆ. ಆ ಬಳಿಕ ಸ್ಥಳ ಮಹಜರು ನಡೆಯಲಿದೆ. ಇದಾದ ಬಳಿಕ ದರ್ಶನ್ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/08/rajyapala-governer-marriage-age-of-girl-increased-kannada-news/
https://newsnotout.com/2024/08/malayalam-actor-siddique-kannada-news-fir-case-police/
See also  ಉಡುಪಿ: ಚಾಕುವಿನಿಂದ ಇರಿದು ಪತ್ನಿಯ ಕೊಲೆ, ಟೆರೇಸ್‌ ನಿಂದ ಬಿದ್ದಳು ಎಂದು ಕಥೆ..? ರೀಲ್ಸ್ ನಲ್ಲಿ ಬ್ಯೂಸಿಯಾಗಿದ್ದ ಪತ್ನಿ ಜೊತೆ ಜಗಳ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget