ಸಿನಿಮಾ

ನಟ ದರ್ಶನ್‌ ಆಸ್ಪತ್ರೆಗೆ ದಾಖಲು..! ನಾಳೆ(ಎ.4) ಆಪರೇಷನ್‌..!

225

ನ್ಯೂಸ್ ನಾಟೌಟ್:  ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುವ ತೀರ್ಮಾನ ಕೈಬಿಟ್ಟು ಕಮಲ ಹಿಡಿದಿರುವ ಸುಮಲತಾ ಅಂಬರೀಶ್‌, ಇನ್ನು ಮುಂದೆ ಬಿಜೆಪಿ ಕಾರ್ಯಕರ್ತಳಾಗಿ ಕೆಲಸ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಮಂಡ್ಯದಲ್ಲಿ ನಡೆದ ಸುಮಲತಾ ಬಹಿರಂಗ ಸಭೆಯಲ್ಲಿ ದರ್ಶನ್‌ ಕೂಡ ಭಾಗಿಯಾಗಿದ್ದರು. ಅವರ ಕೈ ಪೆಟ್ಟಾಗಿದ್ದು ಕಂಡು ಬಂದಿದ್ದು, ಇದೀಗ ನಟ ಆಪರೇಷನ್‌ಗೆ ಒಳಗಾಗಲಿದ್ದಾರೆ.ʻʻಇಂದು ಆಸ್ಪತ್ರೆಗೆ ಆಡ್ಮಿಟ್‌ ಆಗಿ ನಾಳೆ ಆಪರೇಷನ್‌ ಮಾಡಿಸಿಕೊಳ್ಳಲಿದ್ದೇನೆ. ಅಮ್ಮನಿಗೆ ಮೊದಲೇ ಡೇಟ್‌ ಕೊಟ್ಟಿದ್ದೆ. ಇಂದು ಇಲ್ಲಿಗೆ ಬಂದೆʼʼಎಂದು ದರ್ಶನ್ ಸಭೆಯಲ್ಲಿ ಹೇಳಿದ್ದಾರೆ.

ಶೂಟಿಂಗ್‌ ಸಮಯದಲ್ಲಿ ದರ್ಶನ್‌ ಕೈಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಅವರ ಕೈಗೆ ಬೆಲ್ಟ್‌ ಹಾಕಲಾಗಿದೆ.ಎಚ್‌.ಡಿ. ಕುಮಾರಸ್ವಾಮಿ ಅವರದ್ದು ಸೌಜನ್ಯಯುತ ಭೇಟಿಯಾಗಿತ್ತು. ಅವರು ನನ್ನನ್ನು ಭೇಟಿ ಮಾಡಿದ ವೇಳೆ ಈಗಿನ ಚುನಾವಣೆ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ. ಹಳೆಯದ್ದನ್ನೆಲ್ಲ ಮರೆತು ಬಿಡಿ ಎಂದು ಮನವಿ ಮಾಡಿದ್ದರು. ಅಲ್ಲದೆ, ತಮಗೆ ಬೆಂಬಲ ಸೂಚಿಸಿ ಎಂದೂ ಕೇಳಿಕೊಂಡಿದ್ದರು ಎಂದು ಎಚ್‌ಡಿಕೆ ಭೇಟಿ ಬಗ್ಗೆ ಸುಮಲತಾ ಅಂಬರೀಶ್‌ ಪ್ರತಿಕ್ರಿಯೆ ನೀಡಿದ್ದಾರೆ.

See also  ಡಿಕೆಶಿಯನ್ನು ಭೇಟಿಯಾದ ದರ್ಶನ್ ಪತ್ನಿ..! ಕುತೂಹಲ ಮೂಡಿಸಿದ ವಿಜಯಲಕ್ಷ್ಮಿ ನಡೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget