ಕ್ರೈಂವೈರಲ್ ನ್ಯೂಸ್ಸಿನಿಮಾ

ದರ್ಶನ್ ​ಗೆ ಮಧ್ಯಂತರ ಜಾಮೀನು ರದ್ದಾಗುವ ಸಾಧ್ಯತೆ..! ಇಂದು(ನ.26) ಭವಿಷ್ಯ ನಿರ್ಧಾರ..!

236

ನ್ಯೂಸ್ ನಾಟೌಟ್: ನಟ ದರ್ಶನ್ ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದು ಹೊರಕ್ಕೆ ಬಂದಿದ್ದಾರೆ. ಅವರು ಆಸ್ಪತ್ರೆಯಲ್ಲೇ ಇದ್ದು, ಚಿಕಿತ್ಸೆ ಮುಂದುವರಿದಿದೆ. ಅವರು ಈವರೆಗೆ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇಂದು(ನವೆಂಬರ್ 26) ಹೈಕೋರ್ಟ್​ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಅಲ್ಲಿ ಈ ಎಲ್ಲಾ ವಿಚಾರಗಳು ಮತ್ತೊಮ್ಮೆ ಚರ್ಚೆಗೆ ಬರೋ ಸಾಧ್ಯತೆ ಇದೆ.

ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ನೇತೃತ್ವದ ಹೈಕೋರ್ಟ್ ಪೀಠದಲ್ಲಿ ದರ್ಶನ್, ಪವಿತ್ರಾಗೌಡ, ನಾಗರಾಜು ಆರ್., ಅನುಕುಮಾರ್, ಲಕ್ಷ್ಮಣ್ ಎಂ. ಹಾಗೂ ಜಗದೀಶ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ವೇಳೆ ಯಾವ ರೀತಿಯ ವಾದ ವಿವಾದಗಳು ನಡೆಯುತ್ತವೆ ಎನ್ನುವ ಕುತೂಹಲ ಮೂಡಿದೆ.
ಅನಾರೋಗ್ಯ ಕಾರಣಕ್ಕೆ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ಆದರೆ ಈವರೆಗೂ ಸರ್ಜರಿ ಮಾಡಿಸದೇ ಇರುವ ಬಗ್ಗೆ ಉತ್ತರಿಸಬೇಕಾದ ಅನಿವಾರ್ಯತೆ ಇದೆ. ಸೂಕ್ತ ವಿವರಣೆ ನೀಡದಿದ್ದರೆ ಮಧ್ಯಂತರ ಜಾಮೀನು ಹಿಂಪಡೆಯಲು ಕೋರ್ಟ್​ಗೆ ಅವಕಾಶವಿದೆ.

ಆರೋಪಿಗಳೊಂದಿಗೆ ದರ್ಶನ್ ತೆಗೆಸಿಕೊಂಡಿದ್ದ ಫೋಟೋ ಪೊಲೀಸರಿಗೆ ಈಗ ಸಿಕ್ಕಿದೆ. ಇದು ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಎನಿಸಿಕೊಂಡಿದೆ. ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಈ ಫೋಟೋಗಳು ಸಾಕ್ಷಿ ನೀಡುವ ರೀತಿಯಲ್ಲಿ ಇದೆ. ಈ ವಿಚಾರವಾಗಿ ಪೊಲೀಸರು ಹೆಚ್ಚುವರಿ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದೆಲ್ಲವನ್ನೂ ಆಧರಿಸಿ ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಂಡಿಸಲಿದ್ದಾರೆ.

Click

https://newsnotout.com/2024/11/kannada-news-hasana-alur-2-years-love-jf/
https://newsnotout.com/2024/11/rbi-governer-illness-kannada-news-chennail-apolo/
https://newsnotout.com/2024/11/puri-kannada-news-viral-news-school-jhf/
See also  ಅರಣ್ಯ ಇಲಾಖೆ ರಾಯಭಾರಿಯಾಗಿ ಅನಿಲ್ ಕುಂಬ್ಳೆ ಆಯ್ಕೆ, ಸಂಭಾವನೆ ಪಡೆಯದೆ ಒಪ್ಪಿಕೊಂಡ ಖ್ಯಾತ ಮಾಜಿ ಕ್ರಿಕೆಟಿಗ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget