ಕ್ರೈಂವೈರಲ್ ನ್ಯೂಸ್ಸಿನಿಮಾ

ದರ್ಶನ್ ಕೈದಿ ನಂಬರ್ ನ ಬಟ್ಟೆ ಹಾಕಿ ಮಗುವಿನ ಫೋಟೋ ಶೂಟ್‌ ಮಾಡಿದ ಪೋಷಕರ ವಿರುದ್ಧ ಕೇಸ್ ದಾಖಲು..! ಪೋಷಕರ ಪತ್ತೆಗೆ ಬಲೆ ಬೀಸಿದ ಪೊಲೀಸರು..!

233

ನ್ಯೂಸ್ ನಾಟೌಟ್: ನಟ ದರ್ಶನ್ ಕೈದಿ ನಂಬರಿನಲ್ಲಿ ಮಗುವಿನ ಪೊಟೋ ಶೂಟ್‌ ಮಾಡಿಸಿದ ಪೋಷಕರ ವಿರುದ್ಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ.

ದರ್ಶನ್‌ ಮೇಲಿನ ಅಂಧಾಭಿಮಾನ ಪ್ರದರ್ಶನಕ್ಕೆ ಮುಂದಾಗಿ ಪೋಷಕರು ಕಾನೂನು ಕ್ರಮ ಎದುರಿಸಬೇಕಾಗಿದೆ. ಈ ವಿಚಾರ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ.

ಈಗ ಪೊಲೀಸ್‌ ಇಲಾಖೆಯ ಮೂಲಕ ಪೋಷಕರ ಪತ್ತೆ ಕಾರ್ಯಕ್ಕೆ ಮುಂದಾಗಿದೆ. ಏನೂ ಅರಿಯದ ಸಣ್ಣ ಮಕ್ಕಳ ಮೇಲೆ ಅಂಧಾಭಿಮಾನದಿಂದ ಹುಚ್ಚಾಟ ಮೆರೆದದಕ್ಕೆ ಮತ್ತು ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ.

See also  ಸ್ಪೇನ್ ಹುಡುಗನ ಕೈ ಹಿಡಿದ ಕರ್ನಾಟಕದ ಯುವತಿ, ಈಶಾ ಫೌಂಡೇಶನ್‌ ನ ಯೋಗ ಶಿಕ್ಷಕಿಯ ಪ್ರೇಮ ಕಥೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget