ಕರಾವಳಿಕ್ರೈಂದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ದರ್ಶನ್‍ ಮನೆಯಲ್ಲಿ ಮಹಜರು ನಡೆಸಿದ ಪೊಲೀಸರು..! ರೇಣುಕಾಸ್ವಾಮಿ ಹತ್ಯೆ ದಿನ ದರ್ಶನ್ ಧರಿಸಿದ್ದ ಬಟ್ಟೆ, ಶೂ ಪೊಲೀಸ್ ವಶಕ್ಕೆ..!

266

ನ್ಯೂಸ್ ನಾಟೌಟ್: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆಗೆ ಇಳಿದಿದ್ದು, ದರ್ಶನ್‍ ಮನೆಯಲ್ಲಿ ಮಹಜರು ನಡೆಸಿ ಹತ್ಯೆಯ ದಿನ ದರ್ಶನ್ ಧರಿಸಿದ್ದ ಬಟ್ಟೆ ಮತ್ತು ಶೂವನ್ನು ವಶಕ್ಕೆ ಪಡೆಯಲಾಗಿದೆ.

ತಡರಾತ್ರಿ ನಟ ದರ್ಶನ್ ಮನೆಯಲ್ಲಿ ಮಹಜರು ನಡೆಸಲಾಗಿತ್ತು. ಮನೆಯಲ್ಲಿ ಒಗೆಯದೇ ಇಟ್ಟಿದ್ದ ದರ್ಶನ್ ಬಟ್ಟೆ, ಹಾಗೂ ಶೂಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅವುಗಳನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದಾರೆ. ಇತ್ತ ಕೊಲೆ ಪ್ರಕರಣದ ಎ1 ಆರೋಪಿಯಗಿರುವ ಪವಿತ್ರಾ ಗೌಡ ಮನೆಯಲ್ಲಿ ಕೂಡ ಪೊಲಿಸರು ಇಂದು(ಜೂ.16) ಸ್ಥಳ ಮಹಜರು ನಡೆಸಿದ್ದಾರೆ. ಆರ್.ಆರ್ ನಗರದಲ್ಲಿರುವ ಮನೆಗೆ ಪವಿತ್ರ ಗೌಡ ಹಾಗೂ ಪವನ್ ನನ್ನು ಪೊಲೀಸರು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುತ್ತಿದ್ದಾರೆ. ಇನ್ನೊಂದೆಡೆ ರೇಣುಕಾಸ್ವಾಮಿ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಪವಿತ್ರಾ ಗೌಡ ಚಪ್ಪಲಿ ಹಾಗೂ ಅಂದು ಧರಿಸಿದ್ದ ಬಟ್ಟೆಯನ್ನು ಕೂಡ ಸೀಜ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/06/darshan-and-gang-issue-gold-kannada-news
https://newsnotout.com/2024/06/hair-cutting-shop-owner-misbehaviour-police-issue
https://newsnotout.com/2024/06/viral-news-company-interview-kannada-news
https://newsnotout.com/2024/06/darshan-and-gang-issue-accued-and-his-father-nomore
See also  2 ವರ್ಷದ ಪುಟ್ಟ ಮಗುವನ್ನು ನೇಣಿಗೆ ಹಾಕಿ ತಾನೂ ಅತ್ಮಹತ್ಯೆ ಮಾಡಿಕೊಂಡ ತಾಯಿ..! ಈ ನಿರ್ಧಾರಕ್ಕೆ ಕಾರಣವೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget