ಕ್ರೈಂದೇಶ-ವಿದೇಶಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ದರ್ಶನ್ ಪ್ರಕರಣ: ಮನೆಯೂಟ, ಹಾಸಿಗೆ, ಪುಸ್ತಕಗಳಿಗೆ ಮತ್ತೆ ಡಿಮ್ಯಾಂಡ್..! ಇಂದು(ಜು.29) ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

262

ನ್ಯೂಸ್‌ ನಾಟೌಟ್‌: ಮನೆಯೂಟಕ್ಕೆ ಅನುಮತಿ ನೀಡಬೇಕೆಂದು ಕೋರಿ ನಟ ದರ್ಶನ್‌ (Darshan) ಸಲ್ಲಿಸಿದ್ದ ಅರ್ಜಿ ಇಂದು(ಜು.29) ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಮನೆಯೂಟ, ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್ ಜುಲೈ 25 ರಂದು ವಜಾಗೊಳಿಸಿತ್ತು. (Darshan Thoogudeepa).

ಅರ್ಜಿ ವಜಾಗೊಂಡ ಬೆನ್ನಲ್ಲೇ ಹೈಕೋರ್ಟ್‌ನಲ್ಲಿ (High Court) ದರ್ಶನ್ ಪರ ವಕೀಲರ ಅರ್ಜಿ ಸಲ್ಲಿಸಿದ್ದರು. ಕಾನೂನಿಗೆ ಎಲ್ಲರೂ ಒಂದೇ, ಕೈದಿಗಳಲ್ಲಿ ಯಾವುದೇ ಭೇದವಿಲ್ಲ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಆದರೆ ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ. ದರ್ಶನ್ ವಿಚಾರದಲ್ಲಿ ಮೂಲಭೂತ ಹಕ್ಕಿಗೆ ಧಕ್ಕೆ ಕಂಡು ಬಂದಿಲ್ಲ. ಜೈಲಿನ ಊಟ ಕಳಪೆ ಗುಣಮಟ್ಟ ಎಂಬ ಆರೋಪ ಕೇಳಿಬಂದಿಲ್ಲ. ದರ್ಶನ್‌ಗೆ ಜೈಲಿನಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ಈ ಹಿಂದೆ ಮ್ಯಾಜಿಸ್ಟ್ರೇಟ್‌ ಕೋರ್ಟ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಮನುಷ್ಯನಿಗೆ ಬೇಕಾದ ಪೌಷ್ಠಿಕಾಂಶ ಜೈಲಿನ ಊಟ ಒಳಗೊಂಡಿದೆ. ನ್ಯಾಯಾಂಗ ಬಂಧನ ದಿನದಿಂದಲೇ ಆರೋಗ್ಯ (Health) ಸಮಸ್ಯೆ ಒಪ್ಪಲಾಗಲ್ಲ. ದರ್ಶನ್ ಬೆಡ್ ರೆಸ್ಟ್‌ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ. ಬೇರೇನೂ ಹೇಳಿಲ್ಲ. ಪ್ರೋಟಿನ್ ಡಯಟ್ ಕೊಡಬೇಕೆಂದು ವೈದ್ಯರು ಹೇಳಿಲ್ಲ ಎನ್ನಲಾಗಿದೆ.

See also  ಖ್ಯಾತ ವಕೀಲ ಕುಂಞಿಪಳ್ಳಿ ಇನ್ನಿಲ್ಲ, ಮಾಜಿ ಮುಖ್ಯಮಂತ್ರಿಯನ್ನೂ ಪರಾಭವಗೊಳಿಸಿದ್ದ ಕಾಂಗ್ರೆಸ್ ನಾಯಕ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget