ಕ್ರೈಂರಾಜ್ಯವೈರಲ್ ನ್ಯೂಸ್ಸಿನಿಮಾ

ದರ್ಶನ್ ಪ್ರಕರಣ: ರೇಣುಕಾಸ್ವಾಮಿ ಕೊಲೆ ಸಂಬಂಧ ಸೋನು ಗೌಡಗೆ ಪೊಲೀಸ್‌ ನೋಟಿಸ್‌..! ಈ ಬಗ್ಗೆ ಸೋನು ಹೇಳಿದ್ದೇನು..?

235

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ ಬಳಿಕ ಹಲವರು ನಮಗೂ ರೇಣುಕಾಸ್ವಾಮಿ ಫೇಕ್ ಅಕೌಂಟ್ ನಿಂದ ಮೆಸೇಜ್ ಬಂದಿದ್ದವು ಎಂದು ಹೇಳಿಕೊಂಡಿದ್ದಾರೆ, ಅದರಲ್ಲಿ ಸೋನು ಗೌಡ ಕೂಡ ಒಬ್ಬರು. ಮೃತ ರೇಣುಕಾಸ್ವಾಮಿ, ದರ್ಶನ್‌ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಕಾರಣ ಈ ಘಟನೆ ನಡೆಯಿತು ಎನ್ನುವ ಆರೋಪ ಕೂಡ ಇದೆ.

ಈ ಹಿನ್ನೆಲೆಯಲ್ಲಿ ಕೆಲವು ಸೋಶಿಯಲ್‌ ಮೀಡಿಯಾದಲ್ಲಿ ಸ್ಟಾರ್‌ಗಳು ರೇಣುಕಾಸ್ವಾಮಿದ್ದು ಎನ್ನಲಾದ ಇನ್ಸ್ಟಾಗ್ರಾಮ್ ಖಾತೆಯಿಂದ ನನಗೂ ಮೆಸೇಜ್‌ಗಳು ಬಂದಿದೆ ಎಂದು ಆರೋಪಿಸಿದ್ದರು. ಇದೀಗ ಈ ರೀತಿ ಆರೋಪ ಮಾಡಿದ ಬಿಗ್‌ಬಾಸ್‌ ಖ್ಯಾತಿಯ ಸೋನುಗೌಡಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ ಎನ್ನಲಾಗಿದೆ.

“ನನಗೂ ನೋಟಿಸ್‌ ಬಂದಿರುವ ಕಾರಣ ನಾನು ಹೋಗಿ ಮಾತನಾಡಬೇಕು ಏನು ಎತ್ತಾ ಅಂತ, ಅದು ಅವರ ಅಕೌಂಟೇನಾ ಅಂತೆಲ್ಲಾ ಮಾತನಾಡಬೇಕಿದೆ. ಆದರೆ ನಾನು ಯಾವುದೇ ದೂರು ಕೊಟ್ಟಿಲ್ಲ. ನಾನು ಈ ವಿಷಯದ ಬಗ್ಗೆ ಮಾತನಾಡಿರುವುದಕ್ಕೆ ನೋಟಿಸ್‌ ಬಂದಿದೆ. ಇದ್ದಾಗ ಯಾಕೆ ಯಾರೂ ಧ್ವನಿ ಎತ್ತಿಲ್ಲ, ಸತ್ತ ಮೇಲೆಯೇ ಯಾಕೆ ಹೇಳುತ್ತಿದ್ದೀರಾ? ನಿಮಗೆ ಸರಿಯಾಗಿ ಗೊತ್ತಾ..? ನಿಮ್ಮ ಬಳಿ ಸಾಕ್ಷಿ ಇದೆಯಾ? ಎನ್ನುವ ಪ್ರಶ್ನೆಗಳ ದೃಷ್ಟಿಯಿಂದ ನೋಟಿಸ್‌ ನೀಡಿದ್ದಾರೆ ಎಂದು ಸೋನು ಗೌಡ ಹೇಳಿಕೊಂಡಿದ್ದಾರೆ. ನಾಂನಂತ ಮಾತ್ರವಲ್ಲ ಈ ಬಗ್ಗೆ ಮಾತನಾಡಿರುವ ಎಲ್ಲರಿಗೂ ನೋಟಿಸ್‌ ಹೋಗಿಯೇ ಹೋಗುತ್ತದೆ ಎಂದಿದ್ದಾರೆ.

Click 👇

https://newsnotout.com/2024/07/amoeba-infection-kannada-news-water-issue-kerala-karnataka-dakshina-kannada
https://newsnotout.com/2024/07/puri-jagannatha-kannada-news-ratha-devotees-are-j-incident
https://newsnotout.com/2024/07/15-days-old-neo-notal-baby-kannada-news-father-under-police-custody
See also  ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯದಲ್ಲಿ ಬಿರುಕು..! ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಬಿಗ್ ಬಾಸ್ ಖ್ಯಾತಿಯ ಜೋಡಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget