ಕ್ರೈಂಬೆಂಗಳೂರುವೈರಲ್ ನ್ಯೂಸ್

ದರ್ಶನ್ ಪ್ರಕರಣ: ಪಟ್ಟಣಗೆರೆ ಶೆಡ್ ಮಾಲಿಕ ಉಲ್ಟಾ ಹೊಡೆದದ್ದೇಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಪಟ್ಟಣಗೆರೆ ಜಯಣ್ಣ ಒಡೆತನದ ಶೆಡ್​ ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ್ದರು. ದರ್ಶನ್ ಸೇರಿದಂತೆ 19 ಮಂದಿ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಈಗ ಶೆಡ್ ಮಾಲಿಕ ಉಲ್ಟಾ ಹೊಡೆದಿದ್ದು, ದರ್ಶನ್ ನನ್ನಿಂದ ಅನುಮತಿ ಪಡೆದಿಲ್ಲ ಎಂದಿದ್ದಾರೆ. ದರ್ಶನ್ ಶೆಡ್​ಗೆ ಬಂದಿದ್ದು ತಮಗೆ ಗೊತ್ತೇ ಇಲ್ಲ ಎಂದು ಜಯಣ್ಣ ಹೇಳಿದ್ದಾರೆ ಎನ್ನಲಾಗಿದೆ.

‘ನಾನು ಶೆಡ್​ನ ಬಾಡಿಗೆ ನೀಡಿದ್ದೇನೆ. ಅವರು ಹೋಗಿದ್ದು ನನಗೆ ಗೊತ್ತೇ ಇಲ್ಲ. ಕಿಶೋರ್ ಅವರು ಬಾಡಿಗೆದಾರ. ಕೀ ಅವನ ಬಳಿಯೇ ಇರುತ್ತದೆ. ನಮಗೂ ಅದಕ್ಕೂ ಸಂಬಂಧವಿಲ್ಲ. ವಿಚಾರಣೆ ವೇಳೆ ಪ್ರಾಪರ್ಟಿ ಬಗ್ಗೆ ಮಾತ್ರ ಕೇಳಿದ್ದಾರೆ’ ಎಂದು ಜಯಣ್ಣ ತಿಳಿಸಿದ್ದಾರೆ. ಜಯಣ್ಣ ಒಡೆತನದ ಶೆಡ್​ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ್ದರು. ತಾನೇ ಆ ಶೆಡ್ ಬಾಡಿಗೆ ನೀಡಿದ್ದೆ ಮತ್ತು ದರ್ಶನ್ ಮತ್ತು ಸ್ನೇಹಿತರು ಅಲ್ಲಿಗೆ ಆಗಾಗ ಬರುತ್ತಿದ್ದರು ಎಂದು ಈ ಹಿಂದೆ ಜಯಣ್ಣ ಹೇಳಿಕೆ ನೀಡಿದ್ದರು.

Related posts

ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ವಿಡಿಯೋ ಪ್ರಸಾರ; ಕಾಂಗ್ರೆಸ್‌ ಅಭ್ಯರ್ಥಿಯಿಂದ ದೂರು

ಕಾಫಿನಾಡಲ್ಲಿ ಭೀಕರ ಸರಣಿ ಅಪಘಾತ ! ದಂಪತಿ ದುರಂತ ಅಂತ್ಯ, 1 ವರ್ಷದ ಮಗು ಅನಾಥ!

ಸತ್ತ ಇಲಿ ಬಾಯಲ್ಲಿಟ್ಟುಕೊಂಡು ಪ್ರತಿಭಟಿಸಿದ ರೈತರು..! ಏರುತ್ತಿದೆ ಕಾವೇರಿಯ ಪ್ರತಿಭಟನೆಯ ಕಾವು, ಇಲ್ಲಿದೆ ವಿಡಿಯೋ