ಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ದರ್ಶನ್‌ ಮನೆಯಿಂದ 70.40 ಲಕ್ಷ ರೂ. ಜಪ್ತಿ ಮಾಡಿದ ಪೊಲೀಸ್..! ಕೊಲೆ ಆರೋಪದ ಬೆನ್ನಲ್ಲೇ ದರ್ಶನ್ ಗೆ ಐಟಿ ಶಾಕ್..?

ನ್ಯೂಸ್ ನಾಟೌಟ್ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್‌ (Darshan) ಸೇರಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು 2 ದಿನ ಪೊಲೀಸ್‌ ಕಸ್ಟಡಿಗೆ ವಹಿಸಿದೆ.

ನಟ ದರ್ಶನ್‌ (Actor Darshan) ಮನೆಯಲ್ಲಿ ಬುಧವಾರ (ಜೂನ್‌ 19) ಪೊಲೀಸರು 37.40 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ. ಇದೀಗ ಕೊಲೆ ಆರೋಪದ ಜತೆಗೆ ದರ್ಶನ್‌ಗೆ ಐಟಿ ಸಂಕಷ್ಟ ಎದುರಾಗಿದೆ ಎಂದು ವರದಿ ತಿಳಿಸಿದೆ. ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ 2 ಲಕ್ಷದವರೆಗೂ ನಗದನ್ನ ಇಟ್ಟು ಕೊಳ್ಳಬಹುದು. ಆದರೆ ದರ್ಶನ್ ಸುಮಾರು 70ಲಕ್ಷ ರೂ. ಹಣ ಇಟ್ಟುಕೊಂಡಿರುವುದರಿಂದ ತನಿಖೆ ಆಗಲಿದೆ ಎನ್ನಲಾಗಿದೆ.

(ದರ್ಶನ್ ಮನೆಯಲ್ಲಿದ್ದ 37.40 ಲಕ್ಷ ರೂ., ಶವ ವಿಲೇವಾರಿಗೆ ಮತ್ತು ಆರೋಪಿಗಳಂತೆ ಶರಣಾಗಲು ಕೊಟ್ಟಿದ್ದ 30 ಲಕ್ಷ ರೂ. ಮತ್ತು ವಿಜಯಲಕ್ಷ್ಮಿ ಮನೆಯಿಂದ ವಶ ಪಡಿಸಿಕೊಂಡ 3 ಲಕ್ಷ ರೂ.) ಮೂಲಗಳ ಪ್ರಕಾರ ದರ್ಶನ್‌ ನಿವಾಸದ ಬೆಡ್‌ರೂಮ್‌ನ ಕಬೋಡ್‌ನಲ್ಲಿ ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬ್ಯಾಗ್‌ನಲ್ಲಿ ಇಟ್ಟಿದ್ದ ದಾಖಲೆ ರಹಿತ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಿಜಯಲಕ್ಷ್ಮೀ ಮನೆಯಲ್ಲಿ 3 ಲಕ್ಷ ರೂಪಾಯಿಯನ್ನೂ ವಶಪಡಿಸಿಕೊಂಡಿದ್ದಾರೆ. ಅಲ್ಲಿಗೆ, ಪ್ರಕರಣದಲ್ಲಿ ಪೊಲೀಸರು ಇದುವರೆಗೆ 70.40 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದಂತಾಗಿದೆ. ಜಪ್ತಿಯಾದ ಹಣದ ಕುರಿತು ಕೂಡ ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿ, ದರ್ಶನ್‌ ಅವರನ್ನು ಕಸ್ಟಡಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Click 👇

https://newsnotout.com/2024/06/kannada-news-bengaluru-karim-nagara-video-call-police-issue

Related posts

ಮದುವೆಯಾಗಲು ನಿರಾಕರಿಸಿದ ಪ್ರಿಯಕರ..! ಕೊಡಲಿಯಿಂದ ಕೊಚ್ಚಿದ ಪ್ರೇಯಸಿ! ಏನಿದು ವಿಕೃತ ಲವ್ ಸ್ಟೋರಿ?

ಯಾರೂ ವಾಸವಿಲ್ಲದ ಮನೆಯ ಫ್ರಿಡ್ಜ್ ​ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆ..! 14 ಎಕರೆ ಜಾಗದಲ್ಲಿರುವ ಪಾಳು ಬಿದ್ದ ಮನೆ..!

ಬೆಳ್ಳಾರೆ: ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಪ್ರಕರಣ, ಆತ್ಮಹತ್ಯೆ ಮಾಡಿಕೊಂಡಿದ್ದೇಕೆ..? ಇಲ್ಲಿದೆ ಕಾರಣ