ಕ್ರೈಂವೈರಲ್ ನ್ಯೂಸ್ಸಿನಿಮಾ

ದರ್ಶನ್ ಪ್ರಕರಣ: ಕೈದಿ ನಂ.6106 ಸ್ಟಿಕ್ಕರ್ ಹಾಕಿಸಿದವರಿಗೆ ಕಾನೂನು ಕಂಟಕ..! ಪೊಲೀಸ್ ಇಲಾಖೆ ನೀಡಿದ ಎಚ್ಚರಿಕೆ ಏನು..?

253

ನ್ಯೂಸ್ ನಾಟೌಟ್ : ಅಭಿಮಾನಿಗಳ ಗಾಡಿಗಳಲ್ಲಿ ದರ್ಶನ್ (Actor Darshan) ಖೈದಿ ನಂಬರ್ 6106 ಸ್ಟಿಕ್ಕರ್‌ಗಳಿಗೆ ಡಿಮ್ಯಾಂಡ್ ಹೆಚ್ಚಾದ ಬೆನ್ನಲ್ಲೇ, ಸ್ಟಿಕ್ಕರ್ ಹಾಕಿಸಿದವರಿಗೆ ಕಾನೂನು ಕಂಟಕ ಎದುರಾಗಿದೆ. ರೂಲ್ಸ್‌ ಬ್ರೇಕ್‌ ಮಾಡಿದರೆ ಕೇಸ್‌ ಬೀಳುತ್ತೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ದರ್ಶನ್‌ಗೆ ಜೈಲಿನಲ್ಲಿ ಖೈದಿ ನಂಬರ್ 6106 ಅನ್ನು ನೀಡಲಾಗಿದೆ. ಈ ನಂಬರ್‌ ಅನ್ನೇ ಸ್ಟಿಕರ್‌ ಮಾಡಿಸಿಕೊಂಡಿರುವ ಫ್ಯಾನ್ಸ್ ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ. ಇದೀಗ ನಂಬರ್ ಪ್ಲೇಟ್ ಮರೆಮಾಚಿ ಸ್ಟಿಕ್ಕರ್ ಅಂಟಿಸಿದವರಿಗೆ ಮತ್ತು ಸಮಾಜಕ್ಕೆ ಹಿಂಸೆಯನ್ನು ಪ್ರಜೋದಿಸುವ ರೀತಿಯ ಅಂದರೆ, ಕೈದಿ ನಂ.6106 ರೀತಿಯ ಸ್ಟಿಕ್ಕರ್ ಅಂಟಿಸಿದ್ದರೆ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುವುದು ಎಂದಿದ್ದಾರೆ.

ಇನ್ನೊಂದೆಡೆ ಯಾವುದೇ ಕಾರಣಕ್ಕೂ ವಾಹನಗಳ ನಂಬರ್ ಪ್ಲೇಟ್ ಮರೆಮಾಚುವಂತಿಲ್ಲ. ನಂಬರ್‌ ಪ್ಲೇಟ್ ಇರುವ ಕಡೆ ಸ್ಟಿಕ್ಕರ್‌ಗಳನ್ನು ಅಂಟಿಸುವಂತಿಲ್ಲ. ಈ ರೀತಿ ಮಾಡಿದರೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಖೈದಿ ನಂಬರ್ ಸ್ಟಿಕ್ಕರ್ ಅಂಟಿಸಿ ನಂಬರ್ ಪ್ಲೇಟ್ ಮರೆ ಮಾಚಿರುವವರ ಬಗ್ಗೆ ಗಮನಕ್ಕೆ ಬಂದಿದೆ. ಅಂತವರ ವಿರುದ್ಧ ಕೇಸ್ ದಾಖಲಿಸಲು ಟ್ರಾಫಿಕ್‌ ಪೊಲೀಸರು ಮುಂದಾಗಿದ್ದಾರೆ. ಡಿಫೆಕ್ಟಿವ್ ನಂಬರ್ ಪ್ಲೇಟ್ ಅಡಿ ಕೇಸ್ ದಾಖಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Click 👇

https://newsnotout.com/2024/06/dengue-6-year-old-baby-nomre-health-care-kannada-news-chikkamagaluru
https://newsnotout.com/2024/06/shawarma-food-quality-and-bactiria-kannada-news-banning-shawarma
https://newsnotout.com/2024/06/school-sindhi-tamanna-bhatia-text-in-school-text-book-perents-opp
https://newsnotout.com/2024/06/actress-rakshita-met-darshan-in-jail-and-reaction-with-prem-kannada-news
https://newsnotout.com/2024/06/t20-cricket-lover-cm-siddaramayya-kannada-news-world-cup-won-by-india
See also  ದಾವಣಗೆರೆ ಗಣೇಶ ಮೂರ್ತಿ ವಿಸರ್ಜನಾ ವೇಳೆ ಕಲ್ಲು ತೂರಾಟ ಪ್ರಕರಣದಲ್ಲಿ18 ಮಂದಿಗೆ ನ್ಯಾಯಾಂಗ ಬಂಧನ..! ಬಂಧಿತರಲ್ಲಿ 8 ಮಂದಿ ಗಣೇಶ ಸಮಿತಿಯವರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget