ನ್ಯೂಸ್ ನಾಟೌಟ್: ನಟ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಹೊಸಕೋಟೆ ಪುರಸಭೆಯು ದರ್ಶನ್ ಬ್ಯಾನರ್ ತೆರವುಗೊಳಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಅಭಿಮಾನಿಗಳು ದರ್ಶನ್ ಬ್ಯಾನರ್ ಹಾಕಿದ್ದರು. ಈ ಬ್ಯಾನರ್ ಗಳನ್ನು ಹೊಸಕೋಟೆ ಪುರಸಭೆ ಸಿಬ್ಬಂದಿ ಅನಧಿಕೃತ ಬ್ಯಾನರ್ ಎಂದು ಹೇಳಿ ತೆರವುಗೊಳಿಸಿದ್ದಾರೆ.
ದರ್ಶನ್ 48ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮೀ, ನಟ ಧನ್ವೀರ್, ಚಿಕ್ಕಣ್ಣ ಇನ್ ಸ್ಟಾಗ್ರಾಂನಲ್ಲಿ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಗೆ ಬರ್ತ್‌ಡೇ ವಿಶ್‌ಗಳ ಸುರಿಮಳೆಯೇ ಹರಿದುಬರುತ್ತಿದೆ.
ಪ್ರತಿ ವರ್ಷವು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದ ದರ್ಶನ್, ಅನಾರೋಗ್ಯದ ಕಾರಣದಿಂದ ಈ ಬಾರಿ ಇವೆಲ್ಲದರಿಂದಲೂ ದೂರ ಉಳಿದಿದ್ದಾರೆ. ಕೇವಲ ಕುಟುಂಬಸ್ಥರು, ಆಪ್ತರ ಜೊತೆಗೆ ಮಾತ್ರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
Click 👇🏻
ಸಿಎಂ ಕಚೇರಿಯ ‘ಕಚೇರಿ ಟಿಪ್ಪಣಿ’ ನಕಲು ಪ್ರಕರಣ..! ಹಲವಾರು ಎಂ.ಎಲ್.ಎಗಳ ಬಳಿ ಪಿಎ ಆಗಿದ್ದವ ಅರೆಸ್ಟ್..!
ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಕುಂಭಮೇಳಕ್ಕೆ ಹೊರಟಿದ್ದ 18 ಭಕ್ತರು ಸಾವು..! ಮೋದಿ ಸಂತಾಪ
ಅಮೆರಿಕದಿಂದ ಭಾರತೀಯರ 2 ಹಂತದ ಗಡಿಪಾರು..! ಅಮೃತಸರದಲ್ಲಿ ಬಂದಿಳಿದ 119 ಮಂದಿ..!
ನಾಣ್ಯಗಳಿಂದ ಕಾರನ್ನು ಅಲಂಕರಿಸಿದ ರಾಜಸ್ತಾನಿ ವ್ಯಕ್ತಿ..! ವಿಡಿಯೋ ವೈರಲ್