ಕ್ರೈಂವೈರಲ್ ನ್ಯೂಸ್ಸಿನಿಮಾ

ಇಂದು(ಅ.14) ನಟ ದರ್ಶನ್‌ ಜಾಮೀನು ಕುರಿತು ತೀರ್ಪು ಪ್ರಕಟ? ಬೇಲ್ ಸಿಗೋದು ಪಕ್ಕಾನಾ..?

236

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್‌ ಆ್ಯಂಡ್ ಗ್ಯಾಂಗ್‌ ಜೈಲು ಸೇರಿದ್ದಾರೆ. 57 ನೇ ಸೆಷನ್ಸ್ ಕೋರ್ಟನ್‌ಲ್ಲಿ ಇಂದು ನಟ ದರ್ಶನ್‌ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ, ಇಂದು(ಅ.14) ತೀರ್ಪು ಪ್ರಕಟವಾಗೋ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ.

ಚಿತ್ರದುರ್ಗಾ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ದಾಸ ಸದ್ಯ ಸೆರೆವಾಸ ಅನುಭವಿಸುತ್ತಿದ್ದಾರೆ. ಇಂದು ದರ್ಶನ್‌ ಅವರ ಬೇಲ್‌ ಅರ್ಜಿ ವಿಚಾರಣೆ ನಡೆಯುತ್ತಿದ್ದು, ದಾಸನ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಹಾಜರ್‌ ಆಗಿದ್ದಾರೆ. 57 ನೇ ಸೆಷನ್ಸ್ ಕೋರ್ಟ್‌ನಲ್ಲಿ ದರ್ಶನ್‌ ಅವರ ಬೇಲ್‌ ಅರ್ಜಿ ವಿಚಾರಣೆ ನಡೆಯುತ್ತಿದೆ.

2.30 ಕ್ಕೆ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ಶುರುವಾಗಿದೆ. ಸದ್ಯ ಮೊದಲಿಗೆ ಆರೋಪಿ ನಾಗರಾಜ್ ಹಾಗೂ ಲಕ್ಷ್ಮಣ್ ಅವರ ಜಾಮೀನು ವಿಚಾರಣೆ ಶುರುವಾಗಿದ್ದು, ದಾಸನ ಜಾಮೀನು ಅರ್ಜಿ ವಿಚಾರಣೆ ಕೂಡ ಇಂದೆ ನಡೆಯಲಿದೆ. ಇನ್ನೂ, ಒಂದು ಕಡೆ ದಾಸ ತೀವ್ರವಾದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ, ವೈದ್ಯರು ಎಮ್‌ಆರ್‌ಐ ಸ್ಕಾನಿಂಗ್‌ ಮಾಡಿಸಿ ಎಂದು ಹೇಳಿದರು ಸಹ ದಾಸ ಇದನ್ನು ಒಪ್ಪುತ್ತಿಲ್ಲ ಎನ್ನಲಾಗಿದೆ.

https://newsnotout.com/2024/10/kiccha-sudeepa-bigboss-kananda-news-viral-news-kananda-news/
See also  ಪಾಕಿಸ್ತಾನದ ಧ್ವಜ ಹಾರಿಸಿದ ಅಪ್ಪ-ಮಗ ಅರೆಸ್ಟ್..! ಉಂಡಮನೆಗೆ ದ್ರೋಹ ಬಗೆದ ಈ ಖತರ್ನಾಕ್ ವ್ಯಕ್ತಿಗಳು ಯಾರು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget