ಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

Challenging Star Darshan arrested: ದರ್ಶನ್ ಬಂಧನದ ಬೆನ್ನಲ್ಲೇ ಗೆಳತಿ ಪವಿತ್ರಾ ಗೌಡ ಪೊಲೀಸ್ ವಶಕ್ಕೆ..! ಆಕೆಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದನಾ ರೇಣುಕಾ ಸ್ವಾಮಿ..?

241

ನ್ಯೂಸ್ ನಾಟೌಟ್: ರೇಣುಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಪೊಲೀಸರು ನಟ ದರ್ಶನನ್ನು ಬಂಧಿಸಿದ್ದಾರೆ. ಇದೀಗ ದರ್ಶನ್ ಗೆಳತಿ ಪವಿತ್ರಾಗೌಡರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಆರ್.ಆರ್.ನಗರ ಠಾಣೆಯ ಪೊಲೀಸರು ಪವಿತ್ರಾಗೌಡಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ಸ್ ಪೆಕ್ಟರ್ ಮಾರ್ಕಂಡಯ್ಯ ಕಾಮಾಕ್ಷಿ ಪಾಳ್ಯ ಪೊಲೀಸ್ ಸ್ಟೇಷನ್ ಗೆ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಪವಿತ್ರಾ ಜೊತೆ ಅವರ ಅಕ್ಕ ಕೂಡ ಠಾಣೆಗೆ ಆಗಮಿಸಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎಂಬುವವರು ಕೊಲೆ ಆಗಿದ್ದರು ಎನ್ನಲಾಗಿದೆ. ನಟ ದರ್ಶನ್ ಸೂಚನೆ ಮೇರೆಗೆ ಕೊಲೆ ನಡೆದಿದೆ ಎನ್ನಲಾಗಿದ್ದು, ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯ ಕೊಲೆ ನಡೆದಿದೆ.

ಅಪೋಲೋ ಮೆಡಿಕಲ್​ನಲ್ಲಿ ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದರು. ಶನಿವಾರ(ಜೂ.8) ರಾತ್ರಿ ರೇಣುಕಾಸ್ವಾಮಿಯನ್ನು ಕರೆ ತಂದ ಕೆಲವರು ಬೆಂಗಳೂರಿನಲ್ಲಿ ದರ್ಶನ ಮುಂದೆಯೇ ಆತನನ್ನು ಚೆನ್ನಾಗಿ ಥಳಿಸಿದ್ದಾರೆ. ದರ್ಶನ ಸಹ ಹಲ್ಲೆ ಮಾಡಿದ್ದಾರೆ ಎಂದು ವರದಿ ಆಗಿದೆ. ಬಳಿಕ ದರ್ಶನ್ ಮುಂದೆ ಏಟು ತಾಳಲಾರದೆ ರೇಣುಕಾ ಸ್ವಾಮಿ ಕೊನೆಯುಸಿರೆಳೆದಿದ್ದಾರೆ, ಬಳಿಕ ಎಲ್ಲರೂ ಸೇರಿ ಚರಂಡಿಗೆ ಬಿಸಾಡಿದ್ದಾರೆ ಎಂದು ವರದಿಯಾಗಿದೆ. ಮೈಸೂರಿನ ಹೋಟೆಲ್​ ನಲ್ಲಿ ನಟ ದರ್ಶನ್ ನನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ.

Click 👇

https://newsnotout.com/2024/06/challenging-star-darshan-arrested-in-process
https://newsnotout.com/2024/06/bike-father-sister-and-son-conflict-kannada-news
https://newsnotout.com/2024/06/kannada-news-hd-devegowda-and-narendra-modi-call
See also   ಬಿ.ಇಡಿ ಓದಲು ಕಾಲೇಜು ಸೇರಿದ್ದ ವಿದ್ಯಾರ್ಥಿನಿ ಉಪನ್ಯಾಸಕನ ಜತೆ ಪರಾರಿ..! ಸೊಪ್ಪು ಮಾರಿ 2 ಲಕ್ಷ ಸಾಲ ಮಾಡಿ ಓದಿಸಿದ್ದ ತಂದೆಗೆ ಅನಾರೋಗ್ಯ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget