ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್

ದರ್ಶನ್ ಜೊತೆಗಿದ್ದ ವಿಲ್ಸನ್​ ಗಾರ್ಡನ್​ ನಾಗ ಮತ್ತು ಸಹಚರರ 18 ಮೊಬೈಲ್ ಮತ್ತು ಡ್ರಗ್ಸ್ ​ ವಶಕ್ಕೆ..! ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮತ್ತೆ ಸಿಸಿಬಿ ದಾಳಿ..!

ನ್ಯೂಸ್ ನಾಟೌಟ್: ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಆರೋಪಿ ದರ್ಶನ್​ಗೆ ರಾಜಾತಿಥ್ಯ ನೀಡಿದ್ದ ಫೋಟೋ ವೈರಲ್​​ ಆಗಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಹಲವು ದಿನಗಳ ಬಳಿಕ ಮತ್ತೆ ಸಿಸಿಬಿ ಅಧಿಕಾರಿಗಳು ಬೆಂಗಳೂರು ಕಾರಾಗ್ರಹಕ್ಕೆ ದಾಳಿ ಮಾಡಿದ್ದಾರೆ.

ರೌಡಿಶೀಟರ್ ವಿಲ್ಸನ್‌ಗಾರ್ಡನ್ ನಾಗ ಜೈಲಿನಿಂದಲೇ ಧಮ್ಕಿ ಹಾಕುತ್ತಿದ್ದನು. ಈ ವಿಚಾರ ತಿಳಿದ ಸಿಸಿಬಿ ಅಧಿಕಾರಿಗಳು ಶನಿವಾರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ಮಾಡಿದ್ದಾರೆ. ತಪಾಸಣೆ ವೇಳೆ ವಿಲ್ಸನ್‌ ಗಾರ್ಡನ್‌ ನಾಗ ಮತ್ತು ಆತನ ಸಹಚರರ ಸುಮಾರು 18 ಮೊಬೈಲ್‌ಫೋನ್‌ ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಅಧಿಕಾರಿಗಳು ಮೊಬೈಲ್ ಜೊತೆಗೆ ಡ್ರಗ್ಸ್ ಹಾಗೂ ಹಣವನ್ನೂ ಸೀಜ್​ ಮಾಡಿದ್ದಾರೆ.

ಆಗಸ್ಟ್​​​ 24 ರಂದು ಸಿಸಿಬಿ ಅಧಿಕಾರಿಗಳು ಬೆಂಗಳೂರು ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಏನು ಸಿಗದೆ ಖಾಲಿ ಕೈಯಲ್ಲಿ ಅಧಿಕಾರಿಗಳು ಬರೀಗೈಯಲ್ಲಿ ಮರಳಿದ್ದರು. ದಾಳಿ ಮಾಡಿದ ಮರು ದಿನವೇ (ಆ.25) ರಂದು ಕೊಲೆ ಆರೋಪಿ ದರ್ಶನ್​ ಜೈಲಿನಲ್ಲಿ ಬಲಗೈಯಲ್ಲಿ ಚಹಾ ಮಗ್​ ಮತ್ತು ಎಡಗೈನಲ್ಲಿ ಸಿಗರೇಟ್​ ಹಿಡಿದಿರುವ ಫೋಟೋ ವೈರಲ್​ ಆಗಿತ್ತು. ಇದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಈಗ ಮಾಹಿತಿ ನೀಡದೆ ಮತ್ತೆ ದಾಳಿ ಮಾಡಿದ್ದರಿಂದ ಮೊಬೈಲ್, ಹಣ ಮತ್ತು ಡ್ರಗ್ಸ್ ದೊರಕಿದೆ ಎನ್ನಲಾಗಿದೆ.

Click

https://newsnotout.com/2024/09/doctors-and-kolkatta-case-police-officer-under-arrest-by-cbi-viral-news/
https://newsnotout.com/2024/09/munirathna-case-caste-and-threat-issue-kannada-news-2-days-police-custody/
https://newsnotout.com/2024/09/wife-for-sale-to-repay-the-loan-amount-kannada-news-police-arrested/
https://newsnotout.com/2024/09/russia-army-and-indian-people-returned-safely-to-karnataka/

Related posts

ಗೂನಡ್ಕ: ಟ್ಯಾಂಕರ್ ಮತ್ತು ಕಾರಿನ ನಡುವೆ ಭೀಕರ ಅಪಘಾತ..! ಗಾಳಿಯಲ್ಲಿ ಗಿರ-ಗಿರನೆ ತಿರುಗಿದ ಕಾರಿನ ಇಂಜಿನ್..! 5 ಯುವಕರು ಪವಾಡ ಸದೃಶ್ಯ ಪಾರು

ನವಿಲು ಮೊಟ್ಟೆ ಕದಿಯಲು ಸರಸರನೇ ಮರಕ್ಕೇರಿದ ಯುವತಿ,ಹಾರಿ ಬಂದ ನವಿಲಿನಿಂದ ಯುವತಿಗೆ ಕಾದಿತ್ತು ಆಘಾತ!

ಪುತ್ತೂರು : 8 ತಿಂಗಳಿನಿಂದ ತರೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಸೆರೆ ! ಇವನ ಮೇಲಿತ್ತು ಹಲವು ಪ್ರಕರಣ !