ಕ್ರೈಂದೇಶ-ವಿದೇಶಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಜೈಲಿನಲ್ಲಿರುವ ದರ್ಶನ್ ಜತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದ ರೌಡಿಶೀಟರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು..! ಮಂಡ್ಯದಲ್ಲಿ ಬೇಲ್ ಮೇಲಿದ್ದವ ಬೆಂಗಳೂರಿಗೆ..!

ನ್ಯೂಸ್ ನಾಟೌಟ್: ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್​ ಜೈಲಿನ ನಿಯಮಗಳನ್ನು ಉಲ್ಲಂಘಿಸಿ ರಾಜಾರೋಷವಾಗಿ ಬದುಕುತ್ತಿರುವ ಬಗ್ಗೆ ಫೋಟೋ ವಿಡಿಯೋಗಳು ಹರಿದಾಡಿದ ಬೆನ್ನಲ್ಲೇ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಜಾಮೀನು ಪಡೆದು ಹೊರಗಿರುವ ರೌಡಿಶೀಟರ್​ ಸತ್ಯ ಜೊತೆ ದರ್ಶನ್​ ವಿಡಿಯೋ ಕಾಲ್ ​ನಲ್ಲಿ ಮಾತನಾಡಿದ್ದರು. ಆ ವಿಡಿಯೋ ಎಲ್ಲ ಕಡೆಗಳಲ್ಲಿ ವೈರಲ್​ ಆಗಿತ್ತು. (Darshan Thoogudeepa)

ವಿಡಿಯೋ ಕಾಲ್ ವಿಚಾರ ಬಹಿರಂಗ ಆದ ಕೂಡಲೇ ಪೊಲೀಸರು ಕ್ರಮ ಕೈಕೊಂಡಿದ್ದಾರೆ. ದರ್ಶನ್ ಜತೆ ವಿಡಿಯೋ ಕಾಲ್​ ಮೂಲಕ ಮಾತನಾಡಿದ ಸತ್ಯನನ್ನು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಮಂಡ್ಯದಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ ಎನ್ನಲಾಗಿದೆ.
ವಿಚಾರಣಾಧೀನ ಖೈದಿ ಆಗಿರುವ ದರ್ಶನ್ ​ಗೆ ಪರಪ್ಪನ ಅಗ್ರಹಾರ ಜೈಲಿನೊಳಗೆ ಅಕ್ರಮವಾಗಿ ಅನೇಕ ಸೌಕರ್ಯಗಳನ್ನು ಒದಗಿಸಲಾಗಿದೆ. ರೌಡಿಗಳ ಜೊತೆ ಸಂಪರ್ಕ, ಗಾರ್ಡನ್​ ಏರಿಯಾದಲ್ಲಿ ಹರಟೆ ಹೊಡೆಯುವ ಅವಕಾಶ, ಸಿಗರೇಟ್​, ಕುರ್ಚಿ ಸೇರಿದಂತೆ ವಿಐಪಿ ಟ್ರೀಟ್​ಮೆಂಟ್​ ಸಿಕ್ಕಿದೆ. ಅದರ ಜೊತೆಗೆ ವಿಡಿಯೋ ಕಾಲ್​ ಕೂಡ ಮಾಡಿರುವುದು ಬಹಿರಂಗ ಆಗಿದ್ದು, ದೊಡ್ಡ ಸಂಚಲನ ಸೃಷ್ಟಿ ಮಾಡಿದೆ.

ವೈರಲ್​ ಆದ ದರ್ಶನ್​ ವಿಡಿಯೋ ಕಾಲ್​ ತುಣುಕಿನಲ್ಲಿ ಇರುವವನು ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್​ ಜನಾರ್ದನ್​ನ ಮಗ ಸತ್ಯ. ಆತನಿಗೆ ಜೈಲಿನಿಂದ ವಿಡಿಯೋ ಕಾಲ್ ಮಾಡಿ ದರ್ಶನ್ ​ರನ್ನು ತೋರಿಸಿದವನು ಕೂಡ ಇನ್ನೋರ್ವ ರೌಡಿಶೀಟರ್ ಮಾರ್ಕೆಟ್ ಧರ್ಮ. ಇತ್ತೀಚೆಗೆ ಸತ್ಯ ಕೂಡ ಜೈಲಿಗೆ ಹೋಗಿಬಂದಿದ್ದ. ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಕೇಸ್​ ದಾಖಲಾಗಿತ್ತು. ಜೈಲಿಗೆ ಹೋಗಿದ್ದ ಸತ್ಯ ಜಾಮೀನನ ಮೇಲೆ ಹೊರಗೆ ಬಂದಿದ್ದ. ಹೊರಗೆ ಬಂದವನು ಮಾರ್ಕೆಟ್ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ‌. ‘ದರ್ಶನ್ ಇರುವುದು ನಮ್ಮ ಪಕ್ಕದ ಸೆಲ್​ನಲ್ಲಿ. ನಿನಗೂ ತೋರಿಸ್ತಿನಿ’ ಎಂದು ಸತ್ಯನಿಗೆ ಹೇಳಿದ್ದ ಮಾರ್ಕೆಟ್​ ಧರ್ಮ, ದರ್ಶನ್ ಕೈಯಲ್ಲಿ ಹಾಯ್ ಹೇಳಿಸಿದ್ದ. ಅದೇ ವಿಡಿಯೋ ಎಲ್ಲ ಕಡೆ ವೈರಲ್​ ಆಗಿದೆ ಎಂದು ಹೇಳಲಾಗುತ್ತಿದೆ.

Click

https://newsnotout.com/2024/08/belagavi-darshan-hindalaga-jail-darshan-and-gang-shift-viral-news/
https://newsnotout.com/2024/08/kasaragodu-govt-kananda-news-engineer-viral-news/
https://newsnotout.com/2024/08/facebook-post-kannada-news-bangladesh-video-kannada-news-agent/
https://newsnotout.com/2024/08/mysore-note-print-office-kannada-news-employement/

Related posts

ಕನ್ನಡಿಯಲ್ಲಿ ತನ್ನ ಮುಖ ನೋಡಿ ವಿಚಿತ್ರವಾಗಿ ವರ್ತಿಸಿದ ಕೋತಿ..! ಇಲ್ಲಿದೆ ವೈರಲ್ ವಿಡಿಯೋ

ನಾಳೆ(ಸೆ.21) ರಾಮಮಂದಿರದಲ್ಲಿ ಸ್ಫೋಟ ಸಂಭವಿಸಲಿದೆ ಎಂದದ್ಯಾರು? ಪೊಲೀಸರಿಗೆ ಮಾಹಿತಿ ನೀಡಿದ ಆ ಅಪ್ರಾಪ್ತ ಬಾಲಕ ಯಾರು..?

15ರ ಬಾಲಕನಿಂದ ಯುವತಿಯ ಜತೆ ಅಸಭ್ಯ ವರ್ತನೆ, ಬಾಲಾಪರಾಧಿಗೆ ವಿಚಿತ್ರ ಶಿಕ್ಷೆ ನೀಡಿದ ಪಂಚಾಯ್ತಿ..!