ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್

ದರ್ಶನ್ ಪ್ರಕರಣ: ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ರೂ. ನೆರವು ನೀಡಿದ ನಟ ವಿನೋದ್ ರಾಜ್, ಈ ಬಗ್ಗೆ ರೇಣುಕಾಸ್ವಾಮಿ ತಂದೆ ಹೇಳಿದ್ದೇನು..?

ನ್ಯೂಸ್ ನಾಟೌಟ್: ಚಿತ್ರದುರ್ಗದ ಮೃತ ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ (Vinod Raj) ಭೇಟಿ ನೀಡಿ ಕುಟುಂಬಸ್ಥರಿಗೆ 1 ಲಕ್ಷ ರೂ. ನೆರವು ನೀಡಿದ್ದಾರೆ. ಮೃತ ರೇಣುಕಾಸ್ವಾಮಿ ನಿವಾಸಕ್ಕೆ ತೆರಳಿ ಪೋಷಕರಿಗೆ ಮತ್ತು ರೇಣುಕಾಸ್ವಾಮಿ ಪತ್ನಿ ಸಹನಾಗೆ ವಿನೋದ್ ರಾಜ್ ಸಾಂತ್ವಾನ ಹೇಳಿದ್ದಾರೆ.

ಬಳಿಕ 1 ಲಕ್ಷ ರೂ. ಕೊಡುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ವಿನೋದ್ ರಾಜ್ ಭೇಟಿಯ ಬಗ್ಗೆ ರೇಣುಕಾಸ್ವಾಮಿ ತಂದೆ ಶಿವನಗೌಡ ಪ್ರತಿಕ್ರಿಯೆ ನೀಡಿದ್ದು, ಮಗನ ಕಳೆದುಕೊಂಡು ಕರುಳು ಕಿತ್ತು ಬರುತ್ತಿದೆ. ಈ ಪ್ರಕರಣದಿಂದ ನಾವು ನೊಂದಿದ್ದೇವೆ. ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ಮಗನ ಕೊಂದವರು ಯಾರು ಎಂಬುದು ನಮಗೆ ಗೊತ್ತಿಲ್ಲ. ಆದರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಟಿ ಲೀಲಾವತಿ ಅವರ ಬಗ್ಗೆ ತುಂಬಾ ಕೇಳಿದ್ದೇನೆ.’ ಇದೀಗ ಅವರ ಮಗ ವಿನೋದ್ ರಾಜ್ ನಮ್ಮ ಮನೆಗೆ ಭೇಟಿ ನೀಡಿದ್ದು, ಸಮಾಧಾನ ತಂದಿದೆ ಎಂದು ಮಾತನಾಡಿದ್ದಾರೆ.

ಜು.23ರಂದು ದರ್ಶನ್‌ ನನ್ನು ಜೈಲಿನಲ್ಲಿ ವಿನೋದ್‌ ರಾಜ್ ಭೇಟಿಯಾಗಿದ್ದರು.‌ ದರ್ಶನ್‌ ಜೈಲಿನಲ್ಲಿರೋದು ನೋವು ತಂದಿದೆ ಎಂದು ಹೇಳಿದ್ದರು.

Click

https://newsnotout.com/2024/07/praveen-nettaru-2-year-for-todayy-kannada-news-issue-sullia/
https://newsnotout.com/2024/07/nava-chandika-homa-at-kolluru-mookambika-temple-udupi-darshan/
https://newsnotout.com/2024/07/street-dog-kannada-news-food-direction-animal-husbandery-kannada/
https://newsnotout.com/2024/07/lover-kannada-news-family-nomore-investigation-issue-viral/
https://newsnotout.com/2024/07/22-kannada-news-arrested-5-members-name-in-tatto-kannada-news/

Related posts

ಭಾರತದ ಬೀದಿ ನಾಯಿ ಜೊತೆ ವಿದೇಶಿ ಮಹಿಳೆಗೆ ಲವ್ ಆದದ್ದು ಹೇಗೆ? ಶ್ವಾನಕ್ಕೂ ಪಾಸ್ಪೋರ್ಟ್ ವೀಸಾ ಮಾಡಿಸಿದ್ದಾರಾ..? ಯಾವ ದೇಶಕ್ಕೆ ಹಾರಲಿದೆ ಭಾರತದ ಶ್ವಾನ? ಇಲ್ಲಿದೆ ವೈರಲ್ ವಿಡಿಯೋ

ಖ್ಯಾತ ನಟ ವಿಜಯ್ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟ ರಾಜಕೀಯಕ್ಕೆ ಎಂಟ್ರಿ..! ಇಲ್ಲಿದೆ ಸಂಪೂರ್ಣ ಮಾಹಿತಿ

ಹುಟ್ಟುಹಬ್ಬದ ದಿನ ದುಬೈಗೆ ಕರೆದುಕೊಂಡು ಹೋಗದ ಗಂಡ;ಸಿಟ್ಟಿನಿಂದ ಮೂಗಿಗೆ ಗುದ್ದಿದ ಹೆಂಡ್ತಿ: ಉದ್ಯಮಿ ಪತಿ ದುರಂತ ಅಂತ್ಯ