ಕರಾವಳಿಕ್ರೈಂಮಂಗಳೂರುವೈರಲ್ ನ್ಯೂಸ್

ದರ್ಶನ್ ಮತ್ತು ಪವಿತ್ರಾಗೌಡ ಪರ ವಕೀಲರು ಧರ್ಮಸ್ಥಳಕ್ಕೆ ಭೇಟಿ..! ಕುತೂಹಲ ಕೆರಳಿಸಿದ ವಕೀಲರ ನಡೆ..!

232

ನ್ಯೂಸ್ ನಾಟೌಟ್: ನಟ ದರ್ಶನ್ (Darshan) ಮತ್ತು ಪವಿತ್ರಾ ಗೌಡ ಪರ ವಕೀಲರ ತಂಡ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ (DharmaSthala) ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದು, ದರ್ಶನ್ ಪರ ಪ್ರಾರ್ಥನೆ ಮಾಡಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ವಕೀಲ ನಾರಾಯಣ ಸ್ವಾಮಿ ಮತ್ತು ತಂಡ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಾನುವಾರ(ಜುಲೈ14) ಭೇಟಿ ನೀಡಿದೆ. ಈ ವೇಳೆ ವಕೀಲರಾದ ರಾಕೇಶ್, ಶಶಾಂಕ್, ಮಂಜುನಾಥ್, ಶಿವಕುಮಾರ್, ಶೇಷಣ್ಣ, ಸೋಮಶೇಖರ್ ಜೊತೆಗಿದ್ದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 10 ಕ್ಕೂ ಹೆಚ್ಚು ಮಂದಿ ಜೈಲು ಸೇರಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ದರ್ಶನ್ ಜೈಲು ಸೇರಿ ಒಂದು ತಿಂಗಳು ಪೂರ್ಣಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಸಂಗ್ರಹವಾಗಿದ್ದು, ಈ ನಡುವೆ ದರ್ಶನ್ ಪರ ವಕೀಲರು ಮಂಜುನಾಥನ ದರ್ಶನ ಪಡೆದದ್ದು ಕುತೂಹಲ ಕೆರಳಿಸಿದೆ.

Click 👇

https://newsnotout.com/2024/07/ksrtc-bus-ticket-rate-hike-kannada-news-viral-news-clarification-from-president
https://newsnotout.com/2024/07/donald-trump-under-attack-by-unkwon-kannada-news-modi-replay
https://newsnotout.com/2024/07/pooja-gandhi-acts-in-serial-kannada-news-divya-viral-news
https://newsnotout.com/2024/07/love-with-married-kannada-news-griculture-issue-kananda-news
https://newsnotout.com/2024/07/bengaluru-police-cyber-issue-kannada-news-call-and-threat
https://newsnotout.com/2024/07/after-46-years-jagannath-temple-treasury-reopn-kannada-news-today
See also  ಪಾಕ್ ಪರ ಯಾರೇ ಘೋಷಣೆ ಕೂಗಿದ್ರೂ ತಪ್ಪು, ಅದು ದೇಶದ್ರೋಹ ಎಂದ ಸಿಎಂ ಸಿದ್ದರಾಮಯ್ಯ..! ಮಂಗಳೂರಿನ ಪ್ರಕರಣಕ್ಕೆ ಪ್ರತಿಕ್ರಿಯೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget