ಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಪುಟ್ಟ ಮಗುವಿಗೆ ಕೈದಿ ಸಂಖ್ಯೆ 6106 ಎಂದು ಬಟ್ಟೆ ತೊಡಿಸಿ ಫೋಟೋಶೂಟ್..! ದರ್ಶನ್ ಅಭಿಮಾನಿಗಳ ಹುಚ್ಚಾಟಕ್ಕೆ ಜನಾಕ್ರೋಶ..!

245

ನ್ಯೂಸ್‌ ನಾಟೌಟ್‌: ನಟ ದರ್ಶನ್ ಅಭಿಮಾನಿಗಳ ಹುಚ್ಚಾಟಕ್ಕೆ ದರ್ಶನ್ ಗೆ ನೀಡಲಾಗಿರುವ ಕೈದಿ ನಂಬರ್ 6106 ಅನ್ನು ಇತ್ತೀಚೆಗೆ ವಾಹನಗಳಲ್ಲಿ ಸ್ಟಿಕ್ಕರ್ ಮಾಡಿಸಿ ಹಾಕಿಕೊಂಡು ಅದು ಟ್ರೆಂಡ್ ಆಗಿತ್ತು ಮತ್ತು ಪೊಲೀಸರು ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು. ಈಗ ಏನೂ ಅರಿಯದ ಮುಗ್ಧ ಮಗುವೊಂದಕ್ಕೆ ಅಪರಾದಿಯಂತೆ ಬಿಳಿ ಡ್ರೆಸ್ ಹಾಕಿಸಿ, ಅದರ ಮೇಲೆ ಕೈದಿ ನಂ.6106 ಎಂದು ಬರೆಯಲಾಗಿದೆ.

ಇತ್ತೀಚೆಗೆ ದರ್ಶನ್ ತಾಯಿ ಪರಪ್ಪನ ಅಗ್ರಹಾರಕ್ಕೆ ಬಂದು ಮಗನನ್ನು ಭೇಟಿಯಾಗಿದ್ದರು, ಇದರ ಜೊತೆಗೆ ಜೈಲು ಸೇರಿದಾಗಿನಿಂದ ವಿಕಲಚೇತನರೂ ಸೇರಿದಂತೆ ಹಲವು ಅಭಿಮಾನಿಗಳು ದರ್ಶನ್ ನನ್ನು ನೋಡಲು ಜೈಲಿಗೆ ಬರುತ್ತಿದ್ದು, ಅನುಮತಿ ಸಿಗದೆ ನಿರಾಶರಾಗುತ್ತಿದ್ದಾರೆ. ಇದರ ಜೊತೆಗೆ ಅತಿಯಾದ ಅಭಿಮಾನದಿಂದ ಅತಿರೇಕದ ಕೆಲಸಗಳನ್ನು ಮಾಡುತ್ತಾ ದರ್ಶನ್ ಫ್ಯಾನ್ಸ್ ಮತ್ತೆ ಸುದ್ದಿಯಾಗುತ್ತಿದ್ದಾರೆ.

‘Brand of sandalhood dboss fans Mysore’ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮೂಲಕ ಕೈದಿ ಸಂಖ್ಯೆಯ ಬಟ್ಟೆ ಹಾಕಿರುವ ಮಗುವಿನ ಫೋಟೋ ಹಂಚಿಕೊಳ್ಳಲಾಗಿದೆ. ಒಂದು ವರ್ಷದ ಮಗವಿಗೆ ಕೈದಿ ರೀತಿಯ ಬಟ್ಟೆ ಹಾಕಿ ಪೋಟೋಶೂಟ್ ಮಾಡಿಸಲಾಗಿದೆ. ದರ್ಶನ್ ​ಗೆ ನೀಡಿರೋ ವಿಚಾರಣಾಧೀನ ಕೈದಿ ಸಂಖ್ಯೆಯನ್ನು ಮಗುವಿಗೆ ಹಾಕಲಾಗಿದೆ. ಕೈಗೆ ಕೋಳ ಮಾದರಿ ಕೂಡ ಇಡಲಾಗಿದೆ. ಅಲ್ಲಿಯೇ ‘ಜೈ ಡಿಬಾಸ್’ ಎಂದು ಬರೆಯಲಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಜನರು ಆಕ್ರೋಶ ಹೊರಹಾಕಿದ್ದಾರೆ.

Click 👇

https://newsnotout.com/2024/07/dengue-girl-nomore-kannada-news-13-year-old-lady-hospital-hasana
https://newsnotout.com/2024/07/mangaluru-jail-conflict-and-under-police-custody
See also  ಶಿಕ್ಷಣ ವ್ಯವಸ್ಥೆಯ ಬಗ್ಗೆ ಬೇಸರ, ಸಿಎಂ ಬಂದು ಅಂತ್ಯಸಂಸ್ಕಾರ ಮಾಡಲಿ ಎಂದು ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget