ಕ್ರೈಂದೇಶ-ವಿದೇಶಬೆಂಗಳೂರುವೈರಲ್ ನ್ಯೂಸ್

ಚೈನ್, ಬ್ರಾಂಡೆಡ್ ಟಿ-ಶರ್ಟ್, ಸನ್ ಗ್ಲಾಸ್, ಕೈ ಯಲ್ಲಿ ಕಡಗ ಧರಿಸಿ ಬಳ್ಳಾರಿಗೆ ಬಂದಿದ್ದ ದಾಸನಿಗೆ ಶಾಕ್..! ದರ್ಶನ್ ಗ್ಯಾಂಗ್ ನ ಇತರ ಆರೋಪಿಗಳು ಧಾರವಾಡ ಮತ್ತು ಶಿವಮೊಗ್ಗ ಜೈಲಿಗೆ ಸ್ಥಳಾಂತರ..!

250

ನ್ಯೂಸ್ ನಾಟೌಟ್: ದರ್ಶನ್‌ ನನ್ನು ಇಂದು(ಆ.29) ಪೊಲೀಸರು ಬಳ್ಳಾರಿ ಜೈಲಿಗೆ ಕರೆ ತಂದಿದ್ದಾರೆ. ಆದರೆ ಬಳ್ಳಾರಿ ಜೈಲಿಗೆ ಎಂಟ್ರಿಯಾಗುತ್ತಿದ್ದಂತೆ ದರ್ಶನ್ ಗೆ ಸಂಕಷ್ಟ ಹೆಚ್ಚಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಹಾಗೂ ಅಶಿಸ್ತಿನ ಕಾರಣದಿಂದ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ನಟ ದರ್ಶನ್ ಹಾಗೂ ಆತನ ಗ್ಯಾಂಗ್‌ನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.

ಈ ಪೈಕಿ ನಟ ದರ್ಶನ್‌ನ್ನು ಪೊಲೀಸರು ಬಳ್ಳಾರಿ ಜೈಲಿಗೆ ಕರೆ ತಂದಿದ್ದಾರೆ. ಜೈಲು ಪ್ರವೇಶಿಸುತ್ತಿದ್ದಂತೆ ಕೈಯಲ್ಲಿದ್ದ ದಾರ, ಕುತ್ತಿಗೆಯ ಚೈನ್, ಕಡಗವನ್ನು ಪೊಲೀಸರು ಬಿಚ್ಚಿಸಿದ್ದಾರೆ. ದರ್ಶನ್ ಪೊಲೀಸರಲ್ಲಿ ಚೈನ್, ದಾರ ಹಾಗೂ ಕಡಗಕ್ಕೆ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಒಪ್ಪದ ಜೈಲು ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ. ಜೈಲು ಅಧಿಕಾರಿಗಳ ತಾಕೀತಿನಿಂದ ದರ್ಶನ್ ಕೈಯಲ್ಲಿದ್ದ ಕೆಂಪು ದಾರ, ಕುತ್ತಿಗೆ ಚೈನ್ ಹಾಗೂ ಕೈಯಲ್ಲಿದ್ದ ಕಡಗವನ್ನು ಬಿಚ್ಚಿಟ್ಟಿದ್ದಾರೆ.
ಜೈಲಿನ ಬಲಭಾಗದ ಸೆಕ್ಯೂರಿಟಿ ಕೊಠಡಿಯಲ್ಲಿ ದರ್ಶನ್ ಸಹಿ ಮಾಡಿದ್ದಾರೆ.

ಇದೇ ವೇಳೆ ದರ್ಶನ್ ತಂದಿರುವ 2 ಬ್ಯಾಗ್‌ಗಳನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಕಪ್ಪು ಟಿಶರ್ಟ್ ಧರಿಸಿದ್ದ ದರ್ಶನ್, ಟಿ ಶರ್ಟ್ ಮೇಲೆ ಚಸ್ಮಾ ಹಾಕಿದ್ದರು. ನಟ ದರ್ಶನ್ ಕರೆತರುವ ಹಿನ್ನಲೆಯಲ್ಲಿ ಜೈಲು ಸುತ್ತ ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ದರ್ಶನ್ ತಪಾಸಣೆ ವೇಳೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಎಸ್ಪಿ ಶೋಭರಾಣಿ , ಸೂಪರಿಡೆಂಟ್ ಲತಾ ನೇತೃತ್ವದಲ್ಲಿ ದರ್ಶನ್ ಜೈಲಿನೊಳಗೆ ಕರೆತರಲಾಗಿದೆ. ಆರೋಪಿ ಧನರಾಜ್ ಕೇಂದ್ರ ಕಾರಾಗೃಹ ಧಾರವಾಡಕ್ಕೆ ಸ್ಥಳಾಂರಿಸಲಾಗಿದೆ. ಎ6 ಆರೋಪಿ ಜಗದೀಶ್, ಎ12 ಆರೋಪಿ ಲಕ್ಷ್ಮಣ್ ನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ.

Click

https://newsnotout.com/2024/08/darshan-thugudeepa-shift-to-ballary-jail-kannada-news-fans/
https://newsnotout.com/2024/08/love-marriage-cinema-choreographer-wife-nomore-bengaluru/
See also  ನಾಯಿಯನ್ನು ತಪ್ಪಿಸಲು ಹೋಗಿ ಲಾರಿಯಡಿ ಬಿದ್ದ ಗರ್ಭಿಣಿ..! ಮುಂದೇನಾಯ್ತು..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget