ಕರಾವಳಿಕ್ರೀಡೆ/ಸಿನಿಮಾಕ್ರೈಂದೇಶ-ವಿದೇಶಬೆಂಗಳೂರುರಾಜ್ಯಸಿನಿಮಾ

ದರ್ಶನ್​ ನ್ಯಾಯಾಂಗ ಬಂಧನದ ಅವಧಿ ಸೆಪ್ಟೆಂಬರ್ 9ರ ವರೆಗೆ ವಿಸ್ತರಣೆ..! ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್ ಮಾಡದಂತೆ ಆರೋಪಿಗಳಿಂದ ಕೋರ್ಟ್ ಗೆ ಮನವಿ..!

197

ನ್ಯೂಸ್ ನಾಟೌಟ್ : ನಟ ದರ್ಶನ್ ಹಾಗೂ ಗ್ಯಾಂಗ್ ನ ನ್ಯಾಯಾಂಗ ಬಂಧನದ ಅವಧಿ ಇಂದಿಗೆ (ಆಗಸ್ಟ್ 28) ಅಂತ್ಯಗೊಳ್ಳುವುದರಲ್ಲಿತ್ತು. ಹೀಗಾಗಿ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿದೆ. ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 9ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.

ನ್ಯಾಯಾಧೀಶರು ಆರಂಭದಲ್ಲಿ ಎಲ್ಲರ ಹಾಜರಾತಿ ಪಡೆದರು. ಆ ಬಳಿಕ ಎಲ್ಲಾ ಆರೋಪಿಗಳಿಗೂ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಜೈಲಲ್ಲಿ ಸಿಗರೇಟ್ ಸೇದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಪೊಲೀಸರು ವಿಚಾರಣೆ ಎದುರಿಸಲಿದ್ದಾರೆ. ಆ ಬಳಿಕ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.

ಪ್ರಕರಣದ ಆರೋಪಿ ಪ್ರದೂಶ್ ನನ್ನು ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಶಿಫ್ಟ್‌ ಮಾಡದಂತೆ ಆರೋಪಿ ಪ್ರದೋಶ್ ಕೋರ್ಟನ್ನು ಕೋರಿದ್ದರು. ‘ನನ್ನ ತಂದೆಗೆ ಕ್ಯಾನ್ಸರ್ ಇದೆ. ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಾಯರ್ ಭೇಟಿಗೂ ಅವಕಾಶ ನೀಡುತ್ತಿಲ್ಲ. ಹೀಗಾಗಿ ತಮ್ಮನ್ನು ಬೇರೆ ಕಡೆಗೆ ಶಿಫ್ಟ್ ಮಾಡಬೇಡಿ’ ಎಂದು ಪ್ರದೂಶ್ ಕೇಳಿಕೊಂಡಿದ್ದಾರೆ. ಆದರೆ, ಈ ಮನವಿಯನ್ನು ಜಡ್ಜ್ ತಿರಸ್ಕರಿಸಿದ್ದಾರೆ. ‘ಕಾನೂನಿನ ಪ್ರಕಾರ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಜಡ್ಜ್​ ಹೇಳಿದ್ದಾರೆ.

Click

https://newsnotout.com/2024/08/ksrtc-kannada-news-kollegala-magic-ksrtc-travellers-saved/
https://newsnotout.com/2024/08/darshan-kidi-k-darshan-shift-to-ballary-accued-number-changed/
https://newsnotout.com/2024/08/rajyapala-governer-marriage-age-of-girl-increased-kannada-news/
https://newsnotout.com/2024/08/malayalam-actor-siddique-kannada-news-fir-case-police/
https://newsnotout.com/2024/08/krishna-janmastami-2-girls-kannada-news-at-up-police-investigation-tree/
See also  ಕಾಂಗ್ರೆಸ್ ಪಕ್ಷವೇ ಒಂದು ಭಯೋತ್ಪಾದಕ ಸಂಘಟನೆ : ನಳೀನ್ ಆರೋಪ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget