ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ದರ್ಶನ್ ಪ್ರಕರಣ: ಮಧ್ಯರಾತ್ರಿ ತಂದೆಯ ಅಂತ್ಯಕ್ರಿಯೆ ನೆರವೇರಿಸಿದ ರೇಣುಕಾಸ್ವಾಮಿ ಕೊಲೆ ಆರೋಪಿ..! ಮಗನ ಬಂಧನದ ವಿಷಯ ತಿಳಿದು ತಂದೆಗೆ ಹೃದಯಾಘಾತ..!

ನ್ಯೂಸ್ ನಾಟೌಟ್: ನಟ ದರ್ಶನ್ (Darshan Thoogudeepa) ಮತ್ತು ಗ್ಯಾಂಗ್ ನಲ್ಲಿ ಒಬ್ಬನಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಅನುಕುಮಾರ್ ಎಂಬಾತ ತನ್ನ​ ತಂದೆ ಚಂದ್ರಣ್ಣ (60) ಎಂಬವರ ಅಂತ್ಯಕ್ರಿಯೆಗೆ ಶನಿವಾರ(ಜೂ.15) ಮಧ್ಯರಾತ್ರಿ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ರುದ್ರಭೂಮಿಗೆ ಬಂದು ಕಾರ್ಯ ನೆರವೇರಿಸಿದ್ದಾನೆ. ತಂದೆಯ ಅಂತ್ಯಕ್ತಿಯೆಯಲ್ಲಿ ಆರೋಪಿ ಅನುಕುಮಾರ್​ ಭಾಗವಹಿಸಿದ್ದರು.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನನ್ನು ಕಂಡು ತಾಯಿ ಕಣ್ಣೀರಿಟ್ಟರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ7 ಅನುಕುಮಾರ್​ ಬಂಧಿತರಾಗಿದ್ದನ್ನು ತಿಳಿದು ಅವರ ತಂದೆ ಚಂದ್ರಣ್ಣ ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿಯನ್ನು ಅಪಹರಿಸಿದ್ದ ನಾಲ್ವರು ಆರೋಪಿಗಳು ಎ4 ರಘು, ಎ6 ಜಗದೀಶ್, ಎ7 ಅನು, ಎ8 ರವಿಯನ್ನು ಪೊಲೀಸರು ಚಿತ್ರದುರ್ಗಕ್ಕೆ ಕರೆತಂದಿದ್ದಾರೆ. ಅನುಕುಮಾರ್​ ಹೊರತುಪಡಿಸಿ ಉಳಿದ ಆರೋಪಿಗಳನ್ನು ಖಾಸಗಿ ಹೋಟೆಲ್​​ನಲ್ಲಿ ಇರಿಸಲಾಗಿದೆ. ಅಂತ್ಯಕ್ರಿಯೆ ನೆರವೇರಿದ ಬಳಿಕ ಚಿತ್ರದುರ್ಗದಲ್ಲೂ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/06/darshan-and-gang-issue-gold-kannada-news
https://newsnotout.com/2024/06/hair-cutting-shop-owner-misbehaviour-police-issue
https://newsnotout.com/2024/06/viral-news-company-interview-kannada-news

Related posts

ಸುಳ್ಯ: ಸ್ಲ್ಯಾಬ್ ನಿಂದ ಮುಚ್ಚಲ್ಪಟ್ಟಿದ್ದ ಚರಂಡಿಯೊಳಗೆ ಬಿದ್ದ ವ್ಯಕ್ತಿ..! ಸ್ಲಾಬ್ ತೆಗೆದು ರಕ್ಷಿಸಿದ ಸ್ಥಳೀಯರು..! ಏನಿದು ಘಟನೆ?

ಕಲ್ಲಡ್ಕ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು! ಕಾರಣ ನಿಗೂಢ!

ಡಿಕೆಶಿಯನ್ನು ಭೇಟಿಯಾದ ದರ್ಶನ್ ಪತ್ನಿ..! ಕುತೂಹಲ ಮೂಡಿಸಿದ ವಿಜಯಲಕ್ಷ್ಮಿ ನಡೆ..!