ಕ್ರೈಂದೇಶ-ವಿದೇಶಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಫೇಕ್ ಅಕೌಂಟ್ಸ್‌ ನಿಂದ ಮೆಸೇಜ್ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ‘ಡಿ’ ಗ್ಯಾಂಗ್ ಪತ್ತೆ ಮಾಡಿದ್ದೇ ರೋಚಕ..! 11 ದಿನಗಳ ಬಳಿಕ ಪವಿತ್ರಾ ಗೌಡ ಜೊತೆಗಿನ ಚಾಟ್ ಲಿಸ್ಟ್ ಪೊಲೀಸರಿಗೆ ಲಭ್ಯ..!

256

ನ್ಯೂಸ್ ನಾಟೌಟ್: ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ರೋಚಕ ಸಂಗತಿಗಳು ಹೊರಬೀಳುತ್ತಿವೆ. ರೇಣುಕಾಸ್ವಾಮಿಯನ್ನು ನಟ ದರ್ಶನ್ (Darshan) ಮತ್ತು ಗ್ಯಾಂಗ್ ಪತ್ತೆ ಮಾಡಿದ್ದು ಹೇಗೆ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ರೇಣುಕಾಸ್ವಾಮಿ ಯಾವ ಹೆಸರಿನಲ್ಲಿ ಚಾಟ್ ಮಾಡಿದ್ದ? ಆತನ ವಿಳಾಸ, ಫೋನ್ ನಂಬರ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಪವಿತ್ರಗೌಡ ಜೊತೆಯಲ್ಲಿ ರೇಣುಕಾಸ್ವಾಮಿ ಮಾಡಿದ್ದ ಚಾಟ್ ಲಿಸ್ಟ್ ಈಗ ಪೊಲೀಸರಿಗೆ ೧೧ ದಿನಗಳ ಬಳಿಕ ಸಿಕ್ಕಿದೆ. ರೇಣುಕಾಸ್ವಾಮಿ, ಪವಿತ್ರಾಗೌಡ ಜೊತೆಗೆ ಚಾಟ್ ಮಾಡಿದ್ದು ಗೌತಮ್ ಎಂಬ ಹೆಸರಿನಲ್ಲಿ. ಕಾಮೆಂಟ್ ಮಾಡಲು ರೆಡ್ಡಿ ಹೆಸರಲ್ಲಿ ಮತ್ತು ಅದೇ ಹೆಸರಿನಲ್ಲಿ ಅಕೌಂಟ್ ಕ್ರಿಯೇಟ್ ಆಗಿತ್ತು ಎನ್ನಲಾಗಿದೆ.

ಆದರೆ ಮೆಸೇಜ್ ಮಾಡುವಾಗ ಗೌತಮ್ ಅಕೌಂಟ್ ಅಲ್ಲಿ ಮೆಸೇಜ್ ಮಾಡುತ್ತಿದ್ದ. ಹೀಗೆ ಮೆಸೇಜ್ ಮಾಡುವಾಗ ತನ್ನ ಫೋನ್ ನಂಬರ್ ಕೊಟ್ಟಿದ್ದಾನೆ. ಜೊತೆಗೆ ತನ್ನ ಫೋಟೋವನ್ನು ಕೂಡ ಕಳುಹಿಸುವಂತೆ ಪವಿತ್ರಾ ಗೌಡ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೇ ಇಟ್ಟುಕೊಂಡು ‘ಡಿ’ ಗ್ಯಾಂಗ್ ಇನ್ನೊಂದು ನಕಲಿ ಐಡಿ ಕ್ರಿಯೇಟ್ ಮಾಡಿ ಖೆಡ್ಡಾಗೆ ಕೆಡವಿದ್ದಾರೆ. ರೇಣುಕಾಸ್ವಾಮಿ ಚಿತ್ರದುರ್ಗದವನು ಅಂತಾ ಗೊತ್ತಾದ ಮೇಲೆ ರಾಘುಗೆ ಡೀಲ್ ಒಪ್ಪಿಸಲಾಗಿದೆ. ಡೀಲ್ ಪಡೆದ ರಾಘು, ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದಿದ್ದ ಎಂದು ವರದಿ ತಿಳಿಸಿದೆ.

https://newsnotout.com/2024/06/kannada-news-student-food-quality
See also  ಕರ್ನಾಟಕದಲ್ಲಿ ಗೋಬಿ ಮಂಚೂರಿ ಬಳಿಕ ಚಿಕನ್‌ ಶವರ್ಮಾ ಬ್ಯಾನ್..? ಆಹಾರ ಇಲಾಖೆಯಿಂದ ಮಂಗಳೂರಿನಲ್ಲೂ ಶವರ್ಮಾ ಗುಣಮಟ್ಟ ಪರಿಶೀಲನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget