ನ್ಯೂಸ್ ನಾಟೌಟ್: ನಟ ದರ್ಶನ್ ಎಲ್ಲೇ ತೆರಳಿದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅವರ ಮನೆಯ ಹೊರಗೆ ನಿತ್ಯ ಸಾಕಷ್ಟು ಫ್ಯಾನ್ಸ್ ದರ್ಶನ್ ನ ನೋಡಲು ಕಾತುರದಿಂದ ಕಾಯುತ್ತಾ ಇರುತ್ತಾರೆ. ಈಗ ದರ್ಶನ್ ಅವರಿಗೆ ಬೆನ್ನು ನೋವಿನಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎನ್ನಲಾಗಿದ್ದು, ಈ ಕಾರಣದಿಂದ ಸಿನಿಮಾ ಶೂಟಿಂಗ್ ನಲ್ಲೂ ನಟ ಭಾಗವಹಿಸಿಲ್ಲ ಎನ್ನಲಾಗಿದೆ. ಈ ನಡುವೆ ಮಹಿಳಾ ಅಭಿಮಾನಿಯಿಂದ ನಟನ ಮನೆಮುಂದೆ ಹೈಡ್ರಾಮವೊಂದು ನಡೆದಿದೆ.
View this post on Instagram
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ದರ್ಶನ್ ಕಾರನ್ನು ಏರಲು ಬರುತ್ತಿರುವ ದೃಶ್ಯ ಇದೆ. ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು, ಸೆಲ್ಫಿ ತೆಗೆದುಕೊಳ್ಳಲು ಕೆಲವರು ಮುಗಿ ಬಿದ್ದಿದ್ದಾರೆ. ದರ್ಶನ್ ಕಾರನ್ನು ಏರಿ ಹೊರಟರೂ ಫ್ಯಾನ್ಸ್ ಬಿಟ್ಟಿಲ್ಲ. ‘ನನಗೆ ಬೆನ್ನು ನೋವು ಇದೆ’ ಎಂದು ದರ್ಶನ್ ಮನವಿ ಮಾಡಿಕೊಂಡರೂ ಫ್ಯಾನ್ಸ್ ಕೇಳುತ್ತಿಲ್ಲ. ಅಸಮಾಧಾನಗೊಂಡು ಕಾರು ಏರಿ ಹೊರಟರೂ ಮತ್ತೆ ಮಹಿಳಾ ಅಭಿಮಾನಿ ಕಾರಿನ ಹಿಂದೆ ತೆರಳಿ ಅತ್ತು-ಗೋಗರೆದಿದ್ದಾರೆ. ಈ ವೇಳೆ ಮತ್ತೆ ಕಾರು ನಿಲ್ಲಿಸಿ ದರ್ಶನ್ ಸೆಲ್ಫಿ ನೀಡಿದ್ದಾರೆ.