ಕ್ರೀಡೆ/ಸಿನಿಮಾಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ದರ್ಶನ್‌ ಪ್ರಕರಣದಲ್ಲಿ ಮತ್ತೆ ವಿಚಾರಣೆಗೆ ಹಾಜರಾದ ಚಿಕ್ಕಣ್ಣ..! ಹೀಗೆ ಅಂತ ಗೊತ್ತಿದ್ದರೆ ದರ್ಶನ್ ರನ್ನು ಭೇಟಿಯಾಗುತ್ತಿರಲಿಲ್ಲ ಎಂದ ನಟ..!

230

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧ ನಟ ಚಿಕ್ಕಣ್ಣ (Chikkanna) ಇಂದು (ಆ.29) ಬಸವೇಶ್ವರನಗರದಲ್ಲಿರುವ ಎಸಿಪಿ ಕಚೇರಿಗೆ ಎರಡನೇ ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. ಆರೋಪಿ ದರ್ಶನ್ ಭೇಟಿಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಕ್ಕೆ ಮತ್ತೆ ವಿಚಾರಣೆಗೆ ಕರೆದರು ಎಂದು ಚಿಕ್ಕಣ್ಣ ಹೇಳಿದ್ದಾರೆ.

ವಿಚಾರಣೆಯ ಬಳಿಕ ಚಿಕ್ಕಣ್ಣ ಮಾತನಾಡಿ, ನಾನು ಒಬ್ಬ ಸಾಕ್ಷಿದಾರನಾಗಿದ್ದುಕೊಂಡು ಹೋಗಿ ದರ್ಶನ್‌ರನ್ನು ಮಾತನಾಡಿಸಬಾರದು ಅನ್ನೋದು ನನಗೆ ಗೋತ್ತಿರಲಿಲ್ಲ. ಹಾಗಾಗಿ ನಾನು ಪರಪ್ಪನ ಅಗ್ರಹಾರಕ್ಕೆ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದ್ದೆ. ಹಾಗಾಗಿ ವಿಚಾರಣೆಗೆ ಬರುವಂತೆ ನಿನ್ನೆ (ಆ.28) ನೋಟಿಸ್ ಕೊಟ್ಟಿದ್ದರು. 9 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಡಲಾಗಿತ್ತು. ಹಾಗಾಗಿ ಇಂದು ವಿಚಾರಣೆಗೆ ಹಾಜರಾಗಿದ್ದೇನೆ.

ವಿಚಾರಣೆಯ ವೇಳೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರ ಬಗ್ಗೆ ಒಂದಷ್ಟು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರ ಕೊಟ್ಟಿದ್ದೀನಿ. ಮತ್ತೆ ಅವರು ವಿಚಾರಣೆಗೆ ಕರೆದರೆ ಬರುತ್ತೇನೆ. ಸದ್ಯ ವಿಚಾರಣೆಗೆ ಬರುವುದಕ್ಕೆ ಹೇಳಿಲ್ಲ. ಸಾಕ್ಷಿದಾರ ಹೋಗಬಾರದು ಅನ್ನೋದು ನನಗೆ ತಿಳಿದಿರಲಿಲ್ಲ. ಗೊತ್ತಿದ್ದರೆ ಹೋಗಿ ದರ್ಶನ್‌ರನ್ನು ಜೈಲಿನಲ್ಲಿ ಭೇಟಿ ಆಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ದರ್ಶನ್ ಅವರನ್ನು ಇಂದು ಬೆಳಗ್ಗೆ ಪರಪ್ಪನ ಅಗ್ರಹಾರದಿಂದ ಪೊಲೀಸ್ ವ್ಯಾನ್‌ನಲ್ಲಿ ಬಳ್ಳಾರಿ ಜೈಲಿಗೆ ಕರೆ ತರಲಾಗಿದೆ.

Click

https://newsnotout.com/2024/08/darshan-and-gang-shifts-to-different-jails-kannada-news-branded-meterials-are-removed/
https://newsnotout.com/2024/08/darshan-thugudeepa-shift-to-ballary-jail-kannada-news-fans/
https://newsnotout.com/2024/08/love-marriage-cinema-choreographer-wife-nomore-bengaluru/
https://newsnotout.com/2024/08/50-cow-kannada-news-police-investigation-cow-are-dropped-to-river/
See also  ಶಾಲೆಗೆ ಬೀಗ ಜಡಿದ ಸಾಲ ಕೊಟ್ಟ ಬ್ಯಾಂಕ್..! ಅತಿಕ್ರಮಣ ಮಾಡದಂತೆ ಬ್ಯಾಂಕ್ ನಿಂದ ಎಚ್ಚರಿಕೆ ಬರಹ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget