ಕ್ರೀಡೆ/ಸಿನಿಮಾಕ್ರೈಂವಿಡಿಯೋವೈರಲ್ ನ್ಯೂಸ್

“ಇವತ್ತು ಇವಳು.. ನಾಳೆ ಅವಳು” ಅಂದ ದರ್ಶನ್ ವಿರುದ್ಧ ತಿರುಗಿಬಿದ್ದ ಅಹೋರಾತ್ರ..! ಈ ಬಗ್ಗೆ ಅಹೋರಾತ್ರ ಹೇಳಿದ್ದೇನು..? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌ : ವಿವಾದಗಳಿಗೂ ದರ್ಶನ್‌ಗೂ ಬಿಡಲಾರದ ನಂಟು. ಒಂದಲ್ಲ ಒಂದು ವಿವಾದ ಅವರನ್ನು ಸುತ್ತಿಕೊಳ್ಳುತ್ತಲೇ ಇರುತ್ತೆ ಮತ್ತು ನಟ ದರ್ಶನ್ ಅದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿರುತ್ತಾರೆ.

ಹಲವು ವರ್ಷಗಳಿಂದ ದರ್ಶನ ಸಂಸಾರ ವಿಷಯ ಬೇಡ ಅಂದರೂ ಬೀದಿ ರಂಪಾಟವಾಗಿ ಬಿಡುತ್ತೆ. ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರ ಗೌಡ ನಡುವಿನ ಕಿತ್ತಾಟ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿದ್ದು ಭಾರಿ ಸುದ್ದಿಯಾಗಿತ್ತು. ಇಷ್ಟೆಲ್ಲ ಆದರೂ, ದರ್ಶನ್ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ.

ಆದರೆ, ಇತ್ತೀಚೆಗೆ ದರ್ಶನ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಬೆಳ್ಳಿಪರ್ವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆ ಮೇಲೆ ದರ್ಶನ್ ತಮ್ಮ ವೃತ್ತಿ ಬದುಕಿನ ಬಗ್ಗೆ ಮಾತಾಡುವಾಗ ವೈಯಕ್ತಿಕ ವಿಚಾರದ ಬಗ್ಗೆನೂ ಮಾತಾಡಿದ್ದರು. ಅದಕ್ಕೂ ಸೋಶಿಯಲ್ ಮೀಡಿಯಾಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. “ಇವತ್ತು ಇವಳು.. ನಾಳೆ ಅವಳು ಅಂದ್ರೆ, ಆದ್ರೆ ನನಗೆ ನನ್ನ ಸೆಲೆಬ್ರೆಟಿಗಲು ಮತ್ತು ದುಡ್ಡು ಹಾಕಿ ಸಿನಿಮಾ ಮಾಡೋ ನಿರ್ಮಾಪಕ, ನಿರ್ದೇಶಕರೇ ಮುಖ್ಯ ಎಂದಿದ್ದಾರೆ.

ದರ್ಶನ್ ನೀಡಿದ ಇದೇ ಹೇಳಿಕೆ ವಿರುದ್ಧ ಅಹೋರಾತ್ರ ವಿಡಿಯೋ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತಮ್ಮ ಕಠೋರವಾದ ಮಾತುಗಳಿಂದ ವಿರೋಧಿಸಿದ್ದಾರೆ. “ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ” ಅಂದಿದ್ದಕ್ಕೆ ಹೆಣ್ಣಿ ನಿಂದಕ ಎಂದು ಅಹೋರಾತ್ರ ಜರಿದಿದ್ದಾರೆ. “ನೀನು ಹೆಣ್ಣನ್ನು ಅಗೌರವಿಸುವಂತಹವನು. ಹೆಣ್ಣು ಮಕ್ಕಳನ್ನು ನಿಂದನೆಗೆ ಬಳಸುವವನು. ಹೆಣ್ಣನ್ನು ಸೂ* ಎಂದು ಕರೆದವನು ನೀನು. ಹೆಣ್ಣನ್ನು ಗೈಡ್ ಮಾಡು ಅಂದರೆ, ತಲೆ ಹಿಡಿಬೇಡಿ.

ತಲೆ ಹೊಡಿಬೇಡಿ ಎಂದವನು ನೀನು. ನೀನೇನು ಸಾಚಾನಾ? ಯಾರಿಗೆ ಬುದ್ದಿ ಹೇಳುವುದಕ್ಕೆ ನಿನಗೇನು ಅರ್ಹತೆ ಇದೆಯೋ? ನೀನು ಗಂಡಲ್ಲ ಅಂತ ಹೇಳುವುದಕ್ಕೆ ಒಂದು ಸಾಕ್ಷಿ ನೀನು ಹೆಣ್ಣನ್ನು ಅಗೌರವಿಸುತ್ತೀಯಾ ಅಂತ ಆಕ್ರೋಶ ಹೊರಹಾಕಿದ್ದಾರೆ. ದರ್ಶನ್ ಧರ್ಮ ಪತ್ನಿಗೆ ಗೌರವ ಕೊಡುತ್ತಿಲ್ಲ ಅಂತ ಆರೋಪ ಅಹೋರಾತ್ರ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. “ಸ್ಪೀಚ್‌ನಲ್ಲಿ ನೀನು ಏನೋ ಹೇಳಿದ್ದು ಇವತ್ತು ಅವಳು.. ನಾಳೆ ಇವಳು ಅಂದರೆ, ನಿನ್ನ ಭಾವನೆಯಲ್ಲಿ ಹೆಣ್ಣು ಅಂದರೆ ಏನಲೇ.. ನಿನ್ನ ಸ್ವಂತ ಧರ್ಮ ಪತ್ನಿಗೆ ಗೌರವ ಕೊಡದ ನೀನು ಯಾವ ಗಂಡಲೇ..” ಎಂದು ಆಹೋರಾತ್ರ ಆಕ್ರೋಶ ಹೊರ ಹಾಕಿದ್ದಾರೆ.

Related posts

ವಶಪಡಿಸಿಕೊಂಡಿದ್ದ ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ದೋಚಿದ ಜನರು..! ಮದ್ಯಪ್ರಿಯರ ಗುಂಪು ನೋಡಿ ಪೊಲೀಸರೇ ಶಾಕ್..! ಇಲ್ಲಿದೆ ವೈರಲ್ ವಿಡಿಯೋ

ಕಾಂತಾರ-2 ಚಿತ್ರ ತಂಡದ ಮೇಲೆ ದೊಡ್ಡ ಆರೋಪ..!, ಹಾಸನದಲ್ಲಿ ಸಿಡಿದೆದ್ದ ಜನ..!

ಸೋಣಂಗೇರಿ: ಕಾರು ಮತ್ತು ಟಿಟಿ ನಡುವೆ ಡಿಕ್ಕಿ..! ಎರಡು ವಾಹನ ಜಖಂ..!