ಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ನಟ ದರ್ಶನ್ ಸೇರಿ ಪ್ರಮುಖ 4 ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ..! 2 ದಿನಗಳ ಕಾಲಾವಕಾಶ ನೀಡಿದ ಕೋರ್ಟ್, 10 ಆರೋಪಿಗಳು ಜೈಲಿಗೆ

ನ್ಯೂಸ್ ನಾಟೌಟ್ : ನಟ ದರ್ಶನ್​, ನಟಿ ಪವಿತ್ರಾ ಗೌಡ ಸೇರಿದಂತೆ ಅನೇಕರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ. ಎಲ್ಲಾ ಆರೋಪಿಗಳನ್ನೂ ಇಂದು(ಜೂ.20) ಸಂಜೆ ಕೋರ್ಟ್ ಗೆ ಹಾಜರು ಪಡಿಸಿದ್ದು, ವಿಚಾರಣೆ ಮುಕ್ತಾಯವಾಗಿದೆ. ದರ್ಶನ್ ಸೇರಿದಂತೆ 4 ಪ್ರಮುಖ ಆರೋಪಿಗಳನ್ನು (ವಿನಯ್, ದನರಾಜ್, ಪ್ರದೋಷ್) ಮತ್ತೆ ಕೋರ್ಟ್ ಅನುಮತಿಯ ಮೇರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದರ್ಶನ್ ಸೇರಿದಂತೆ 6 ಜನರನ್ನು ಮತ್ತೆ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಲಾಗಿತ್ತು. ಈಗಾಗಲೇ ಹಲವು ಸುತ್ತಿನ ವಿಚಾರಣೆ ನಡೆಸಲಾಗಿದೆ. ವಿವಿಧ ಸ್ಥಳಗಳಲ್ಲಿ ಮಹಜರು ಮಾಡಲಾಗಿದೆ.

ಈ ಮೂಲಕ ನೂರಾರು ಬಗೆಯ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಜೂನ್​ 19 ರಂದು ದರ್ಶನ್(Darshan) ಮತ್ತು ಪವಿತ್ರಾ ಗೌಡ ಮತ್ತು ಇತರ ಆರೋಪಿಗಳ ಡಿಎನ್​ಎ ಟೆಸ್ಟ್​ (DNA Test) ಮಾಡಿಸಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ್ಶನ್​, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳಿಗೆ ಡಿಎನ್‌ಎ ಪರೀಕ್ಷೆ ಮಾಡಲಾಗಿದೆ.

Click 👇

https://newsnotout.com/2024/06/darshan-and-vijayalakshmi-court-issue-stay-order-against-media
https://newsnotout.com/2024/06/real-hero-mahesh-babu-helps-poor-family-and-taken-for-granted
https://newsnotout.com/2024/06/polcie-subinspector-case-and-suspended-from-service-and-arrested
https://newsnotout.com/2024/06/ramayana-stage-play-fine-due-to-misleading-content-and-parts
https://newsnotout.com/2024/06/alchohol-kannada-news-tamil-nadu-case-25-people-nomore

Related posts

ನವಿಲಿಗೆ ಹಿಂಸಿಸುತ್ತಿರುವ ವೀಡಿಯೋ ವೈರಲ್! ಅಮಾನವೀಯ ಕೃತ್ಯ ಎಸಗಿದಾತನಿಗಾಗಿ ಪೊಲೀಸರ ಹುಡುಕಾಟ!

ಕೌಡಿಚಾರ್: ಆಂಬ್ಯುಲೆನ್ಸ್ ಅಪಘಾತ, ತಪ್ಪಿದ ದುರಂತ

ತಿಮಿಂಗಿಲ ದೇಹದಲ್ಲಿ 9.5KG ‘ತೇಲುವ ಚಿನ್ನ’ ಪತ್ತೆ..! ಅಷ್ಟಕ್ಕೂ ‘ತೇಲುವ ಚಿನ್ನ’ ಎಂದರೇನು? ಇದರ ಬೆಲೆ ಎಷ್ಟು ಗೊತ್ತಾ?