Latestಕರಾವಳಿಕ್ರೈಂದೇಶ-ವಿದೇಶ

ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ನಿಗೂಢ ಸಾವಿನ ಬಗ್ಗೆ ಪಂಜಾಬ್ ಸಿಎಂಗೆ ಪತ್ರ ಬರೆದ ಕುಟುಂಬಸ್ಥರು..! ಆಕೆಯ ಪೋಷಕರ ಅನುಮಾನಗಳೇನು..?

960

ನ್ಯೂಸ್ ನಾಟೌಟ್: ಪಂಜಾಬ್ ​​ನಲ್ಲಿ ಧರ್ಮಸ್ಥಳದ ಆಕಾಂಕ್ಷ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮ ವೈಫಲ್ಯದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಈಗಾಗಲೇ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಆಕಾಂಕ್ಷ ಸಾವಿನಲ್ಲಿ ಕಾಲೇಜಿನ ಮೇಲೆ ಸಾಕಷ್ಟು ಅನುಮಾನಗಳು ಮೂಡಿವೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆ ಪಂಜಾಬ್ ಸಿಎಂ ಭಗವಂತ್​ ಮಾನ್ ​ಗೆ ಮೃತಾ ಆಕಾಂಕ್ಷ ಪೋಷಕರು ಪತ್ರ ಬರೆದಿದ್ದು, ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಹಿಂದೆ ಎಲ್ ​​ಪಿಸಿ ಕ್ಯಾಂಪಸ್ ​ನಲ್ಲಿ ಇದೇ ರೀತಿ ಹಲವು ಅಸಹಜ ಸಾವುಗಳಾಗಿವೆ. ಇದರಲ್ಲಿ ಕಾಲೇಜಿನ ಕೈವಾಡ ಹೆಚ್ಚಾಗಿ ಕಂಡು ಬರುತ್ತಿದೆ. ಸರಿಯಾದ ತನಿಖೆ ನಡೆದರೆ ಮಾತ್ರ ಸತ್ಯ ಹೊರಬರುತ್ತದೆ. ಸರಿಯಾಗಿ ತನಿಖೆ ನಡೆಸುವಂತೆ ಪಂಜಾಬ್​ ಸಿಎಂಗೆ ಆಕೆಯ ಪೋಷಕರು ಪತ್ರ ಬರೆದಿದ್ದಾರೆ.

ಇನ್ನು ಪ್ರಕರಣ ತಿರುಚಲು ಯತ್ನಿಸುತ್ತಿದ್ದಾರೆ ಎಂದು ಆಕಾಂಕ್ಷ ಪೋಷಕರು ಕಾಲೇಜು ಮತ್ತು ಪೊಲೀಸ್ ಇಲಾಖೆ ವಿರುದ್ಧ ಆರೋಪ ಮಾಡಿದ್ದಾರೆ. ಇನ್ನು ಕೂಡ ಎಫ್ ​​ಐಆರ್​​ ದಾಖಲಾಗಿಲ್ಲ. ಎಫ್ ​ಐಆರ್​ ದಾಖಲಾಗದಿರುವುದರಿಂದ ಮರಣೋತ್ತರ ಪರೀಕ್ಷೆ ಕೂಡ ಆಗಿಲ್ಲ.

ಕಾಲೇಜಿನವರು ನೀಡಿದ ಮಾಹಿತಿ ಆಧಾರದಲ್ಲಿ ಎಫ್ ​ಐಆರ್​ ಮಾಡಲು ಬಿಡುವುದಿಲ್ಲವೆಂದು ಪೋಷಕರು ಪಟ್ಟು ಹಿಡಿದಿದ್ದು, ಇತ್ತ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರೊಫೆಸರ್ ವಿರುದ್ಧ ಎಫ್ ​​ಐಆರ್ ಹಾಕಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಇದರಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಕಾಂಕ್ಷ ಪೋಷಕರು ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಆಕಾಂಕ್ಷ ಪೋಷಕರನ್ನು ಜಲಂಧರ್​ನ ಡಿಐಜಿ ನವೀನ್ ಸಿಂಗ್ಲಾ ಮತ್ತು ಎಸ್​​ಪಿ ರೂರೇಂಧರ್​ ಭಾಟ್ಟಿ ಕೌರ್ ಭೇಟಿ ಮಾಡಿದ್ದಾರೆ. ಈ ವೇಳೆ ಘಟನೆಯನ್ನು ವಿವರಿಸಿ ಪೋಷಕರ ಅಹವಾಲು ಸ್ವೀಕರಿಸಿದ್ದಾರೆ. ಕಾಲೇಜಿನ ವಿರುದ್ಧ ಪ್ರಕರಣ ದಾಖಲಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

ರೈಲು ನಿಲ್ದಾಣದಲ್ಲಿ ಉಗುಳುವವರಿಂದ 3 ತಿಂಗಳಲ್ಲಿ ಬರೋಬ್ಬರಿ 32 ಲಕ್ಷ ರೂ. ದಂಡ ವಸೂಲಿ..! ಅಧಿಕಾರಿಗಳಿಂದ ಮಹತ್ವದ ಮಾಹಿತಿ

ಮದುವೆಯಾಗಿ ಗಂಡನ ಮನೆಗೆ ಬಂದ ಮರುದಿನವೇ ಚಿನ್ನಾಭರಣ, ಹಣ ದೋಚಿ ವದು ಪರಾರಿ..! ದೂರು ದಾಖಲಿಸಿದ ಪತಿ..!

See also  ಬೆಂಗಳೂರು: ಹೈಕೋರ್ಟ್ ನಲ್ಲಿ ವಹೀದಾ ಆರೀಸ್ ಪೇರಡ್ಕರನ್ನು ಭೇಟಿಯಾಗಿ ಗೌರವಿಸಿದ ಡಾ. ಉಮ್ಮರ್ ಬೀಜದಕಟ್ಟೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget