ನ್ಯೂಸ್ ನಾಟೌಟ್: ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಪ್ರತಿಯೊಂದು ತುರ್ತು ಸಂದರ್ಭದಲ್ಲಿಯೂ ತಮ್ಮ ಪ್ರಾಣದ ಹಂಗು ತೊರೆದು ಇತರರ ಪ್ರಾಣ ಉಳಿಸಲು ಶ್ರಮಿಸುತ್ತಾರೆ. ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲೂ ಸಮಯಕ್ಕೆ ಸರಿಯಾಗಿ ಬಂದು ರಕ್ಷಣಾ ಕಾರ್ಯ ಮಾಡುತ್ತಾರೆ. ಇಲ್ಲೊಂದಷ್ಟು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸೇವೆ ಮಾತ್ರವಲ್ಲ ಡ್ಯಾನ್ಸ್ ಮಾಡೋದಕ್ಕೂ ನಾವು ಸೈ ಎನ್ನುತ್ತಾ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಅಗ್ನಿ ಶಾಮಕ ಸೇವಾ ವಾಹನದೊಳಗೆ ಕುಳಿತು ಮಲಯಾಳಂ ಹಾಡಿಗೆ ಉತ್ಸಾಹಭರಿತವಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಭರ್ಜರಿ ಡ್ಯಾನ್ಸ್ ಪರ್ಫಾರ್ಮೆನ್ಸ್ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಬೆಂಕಿ ಡ್ಯಾನ್ಸ್‌ಗೆ ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ.
ಕೇರಳದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವುದರಲ್ಲಿ ಮಾತ್ರವಲ್ಲ ಡ್ಯಾನ್ಸ್ ಮಾಡೋದ್ರಲ್ಲೂ ನಾವು ಪರಿಣಿತರು ಎನ್ನುತ್ತಾ ಭರ್ಜರಿಯಾಗಿ ನೃತ್ಯ ಮಾಡಿದ್ದಾರೆ.
View this post on Instagram
ಈ ಡ್ಯಾನ್ಸ್ ವಿಡಿಯೋ 5 ದಿನಗಳ ಹಿಂದೆ ಹಂಚಿಕೊಂಡಿದ್ದು ಈಗ ವೈರಲ್ ಆಗುತ್ತಿದೆ. ಹೆಚ್ಚಿನವರು ಈ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.