ಕೆವಿಜಿ ಕ್ಯಾಂಪಸ್‌ಸುಳ್ಯ

ಸುಳ್ಯ: ಕೆವಿಜಿ ಆಸ್ಪತ್ರೆಗೆ ದ.ಕ. ಸಂಸದ ಬ್ರಿಜೇಶ್‌ ಚೌಟ ಭೇಟಿ, ವಿಶಿಷ್ಟ ಕಾಯಿಲೆಯಿಂದ ಬಳಲುತ್ತಿರುವ ಚಾಂದಿನಿಯ ಆರೋಗ್ಯ ವಿಚಾರಣೆ

ನ್ಯೂಸ್ ನಾಟೌಟ್: ಹೃದಯದ ಟ್ಯೂಮರ್ ಸಂಬಂಧಿ ಹಾಗೂ ಹೈಪರ್ ಐಜಿಇ ಸಿಂಡ್ರೋಮ್(Hyper IGE Medicated Mast Cell activation) ಎಂಬ ಅತೀ ವಿಶಿಷ್ಟ ಕಾಯಿಲೆಯಿಂದ ಬಳಲುತ್ತಿರುವ ಸುಳ್ಯದ ನಾವೂರು ಗ್ರಾಮದ ಚಾಂದಿನಿ ಜಿಡಿ ವೈದ್ಯಕೀಯ ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಗುರುವಾರ (ಅ. 17) ಸುಳ್ಯದ ಕೆವಿಜಿ ಆಸ್ಪತ್ರೆಗೆ ಭೇಟಿ ನೀಡಿ ಚಾಂದಿನಿ ಅವರ ಆರೋಗ್ಯ ವಿಚಾರಿಸಿದರು. ಈ ಸಂದರ್ಭ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಎ.ಒ.ಎಲ್.ಇ(ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಚಾಂದಿನಿಯವರ ಪತಿ ಪುರುಷೋತ್ತಮ ಸಿ. ಮೊದಲಾದವರು ಉಪಸ್ಥಿತರಿದ್ದರು.

Related posts

ಸಂಪಾಜೆಯ ನಿವೃತ್ತ ಪ್ರಾಂಶುಪಾಲರ ಮನೆಯಿಂದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರು..! ಯಾರೂ ಇಲ್ಲದ ವೇಳೆ ಮನೆ ಬಾಗಿಲನ್ನೇ ಮುರಿದು ನುಗ್ಗಿ ದೋಚಿ ಪರಾರಿ..! ವಿಡಿಯೋ ವೀಕ್ಷಿಸಿ

ಸುಳ್ಯ: ನೆಹರೂ ಮಮೋರಿಯಲ್ ಕಾಲೇಜಿನಲ್ಲಿ RDC-II ಮತ್ತು CATC ಶಿಬಿರ ಸಂಪನ್ನ

ಅತ್ಯಾಚಾರಿ ಶಿಕ್ಷಕನಿಗೆ ಕಠಿಣ ಶಿಕ್ಷೆ ವಿಧಿಸಿ: ಸುಬ್ರಹ್ಮಣ್ಯದ ಎಬಿವಿಪಿ ಘಟಕ ಆಗ್ರಹ