ದಕ್ಷಿಣ ಕನ್ನಡರಾಜಕೀಯರಾಜ್ಯ

ಇಂದು(ಜೂ.3)ದಕ್ಷಿಣ ಕನ್ನಡದ ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾನ, ಡಿ.ಸಿ ಮುಲ್ಲೈ ಮುಗಿಲನ್ ಮತಚಲಾವಣೆ

ನ್ಯೂಸ್ ನಾಟೌಟ್: ವಿಧಾನ ಪರಿಷತ್ ನ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ (ಜೂ.3) ಬೆಳಿಗ್ಗೆ ಆರಂಭವಾಗಿದೆ. ನಗರದ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನ ಐದು ಮತಗಟ್ಟೆಗಳಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 8,189 ಮತದಾರರು ಇದ್ದು, ಅವರಲ್ಲಿ 5,539 ಪುರುಷರು, 2,650 ಮಹಿಳೆಯರು ಇದ್ದಾರೆ. ಪದವೀಧರ ಕ್ಷೇತ್ರದಲ್ಲಿ ಒಟ್ಟು 19,971 ಮತದಾರರು ಇದ್ದು, ಅವರಲ್ಲಿ 11,596 ಮಹಿಳೆಯರು ಹಾಗೂ 8,375 ಪುರುಷ ಮತದಾರರು‌ ಈ ಬಾರಿ ಮತದಾನಕ್ಕೆ ಅರ್ಹರಾಗಿದ್ದಾರೆ ಎಂದು ವರದಿ ತಿಳಿಸಿದೆ. ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತಚಲಾಯಿಸಿದರು.

Click 👇

https://newsnotout.com/2024/06/election-result-and-toll-gate-charge

Related posts

‘ಅಂದು ನನ್ನನ್ನು ಸಿಎಂ ಮಾಡಿ ಅಂದಾಗ ಕುಮಾರಸ್ವಾಮಿ ಹೂ ಅನ್ನಲಿಲ್ಲ’ ಎಂದ ಡಿಸಿಎಂ..! ಹಳೆಯ ಗುಟ್ಟನ್ನು ಬಯಲು ಮಾಡಿದ ಡಿಕೆಶಿ ಹೇಳಿದ್ದೇನು?

ವೋಟಿಂಗ್ ಕಾರ್ಡ್ ಇಲ್ಲದೆಯೇ ವೋಟ್ ಮಾಡುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಪುತ್ರನಿಗೆ ಟಿಕೆಟ್ ಸಿಗದೇ ಇದ್ದಲ್ಲಿ ಬೆಂಬಲಿಗರು ತೀರ್ಮಾನಿಸ್ತಾರೆ ಎಂದ ಕೆ.ಎಸ್.ಈಶ್ವರಪ್ಪ..! ಬೆದರಿಕೆ ಹಾಕಿದ್ರಾ ಮಾಜಿ ಡಿಸಿಎಂ..?