ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸೌಹಾರ್ದತೆಗೆ ಸಂಬಂಧಿಸಿದ ಸಿನಿಮಾ ‘ನೆರೆ ಕೆರೆ’ ಹೊರಬರಲಿದೆ ಎಂದು ತುಳು ರಂಗಭೂಮಿ ಹಾಗೂ ಸಿನಿಮಾ ನಟ ನವೀನ್.ಡಿ ಪಡೀಲ್ ಹೇಳಿದ್ದಾರೆ.
ಮಂಗಳವಾರ(ಮೇ.27) ಮಾತನಾಡಿದ ತುಳು ಚಿತ್ರ ನಟ, ನಮ್ಮ ಮಂಗಳೂರು ಸೌಹಾರ್ದತೆಯ ಊರು, ಬುದ್ಧಿವಂತರ ಊರು. ಆದರೆ ಈಗ ಜಾತಿ ಗಲಾಟೆ, ಕೋಮು ಗಲಭೆ ನಡೆಯುತ್ತಾ ಹೋದರೆ ಇಲ್ಲಿ ಬದುಕು ಕಷ್ಟವಾಗಬಹುದು. ಯುವ ಜನರ ಭವಿಷ್ಯಕ್ಕೆ ಮಾರಕವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಸೌಹಾರ್ದ ಉಳಿಯಬೇಕು. ಕೋಮುದ್ವೇಷ ಅಳಿಯಬೇಕು.ಈಗ ಇರುವ ಗೊಂದಲದ ವಾತಾವರಣವನ್ನು ನಾವು ಸರಿ ಮಾಡಬೇಕು. ಸೌಹಾರ್ದತೆಯ ಸಿನೆಮಾಕ್ಕೆ ಶಶಿರಾಜ್ ರಾವ್ ಕಾವೂರು ಕಥೆ , ಸಂಭಾಷಣೆ ಬರೆದಿದ್ದಾರೆ. ಎಂದರು.
ರಾಜಕೀಯ ಬೇಕು . ಆದರೆ ಓಟು ಪಡೆಯಲು ಇನ್ನೊಬ್ಬರಿಗೆ ತೊಂದರೆ ಮಾಡಬಾರದು, ಓಟಿನ ರಾಜಕೀಯದಿಂದಾಗಿ ಅಮಾಯಕರು ಸಾಯುವುದು ನಿಲ್ಲಬೇಕು ಎಂದು ಹೇಳಿದ್ದಾರೆ.
ತುಳು ಚಿತ್ರರಂಗ ಬೆಳವಣಿಗೆಯ ಹಾದಿಯಲ್ಲಿದೆ.ಆದರೆ ಇವತ್ತು ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಕಲಾವಿದರ ಹೊಟ್ಟೆ ತುಂಬುತ್ತದೆ. ಹೀಗಿದ್ದರೂ ನಿರ್ಮಾಪಕ ಕೈ ಸುಟ್ಟುಕೊಳ್ಳುವಂತಾಗಿದೆ. ಆದರೆ ಅವರು ತುಳು ಚಿತ್ರ ರಂಗವನ್ನು ಉಳಿಸಿ ಬೆಳೆಸುವುದಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಬಂಟ್ವಾಳ: ಅಬ್ದುಲ್ ರಹೀಂ ಹತ್ಯೆ ಪ್ರಕರಣದಲ್ಲಿ 15 ಮಂದಿ ವಿರುದ್ಧ ಎಫ್.ಐ.ಆರ್..! ಇಲ್ಲಿದೆ ಸಂಪೂರ್ಣ ಮಾಹಿತಿ