ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ಕಾಡಾನೆ ಉಪಟಳಕ್ಕೆ ಆರು ವಿದ್ಯುತ್ ಕಂಬಗಳು ಮುರಿದು ಧರೆಗುರುಳಿದ ಘಟನೆ ಬಗ್ಗೆ ವರದಿಯಾಗಿದೆ . ಕಾಡಾನೆ ಈಂದ್ ಮರವೊಂದನ್ನು ತಿನ್ನುವ ಉದ್ದೇಶದಿಂದ ಮರವನ್ನು ಕೆಳಗುರುಳಿಸಿದ್ದು , ಈ ಮರ ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಪರಿಣಾಮ ಸುಮಾರು ಆರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಘಟನೆಯಿಂದ ಆ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಕಂಡು ಬಂದಿದ್ದು, ವಿದ್ಯುತ್ ಇಲ್ಲದೇ ಜನ ಕತ್ತಲಲ್ಲೇ ಕಾಲ ಕಳೆದ ಪ್ರಸಂಗ ಎದುರಾಗಿತ್ತು.