ಕರಾವಳಿ

ಮಂಗಳೂರು: ಕಂಕನಾಡಿ ನಗರ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ನಾಪತ್ತೆ,ಮೊಬೈಲ್ ಲೊಕೇಶನ್ ಆಧಾರದ ಮೇಲೆ ಹುಡುಕಾಟ..!

ನ್ಯೂಸ್ ನಾಟೌಟ್‌: ಹೆಡ್‌ಕಾನ್‌ಸ್ಟೆಬಲ್‌ವೊಬ್ಬರು ನಾಪತ್ತೆಯಾಗಿರುವ ಘಟನೆ ಮಂಗಳೂರಿನಿಂದ ವರದಿಯಾಗಿದೆ.ಇಲ್ಲಿನ ಕಂಕನಾಡಿ ನಗರ ಠಾಣೆಯ ಮಂಜುನಾಥ ಹೆಗ್ಡೆ (41) ನಾಪತ್ತೆಯಾಗಿದ್ದು, ಈ ಬಗ್ಗೆ ಇದೇ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮಂಜುನಾಥ್‌ ಅವರನ್ನು ಸಿಸಿಆರ್‌ಬಿ ಘಟಕಕ್ಕೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.ಅಲ್ಲಿಗೆ ಜ.13ರಂದು ವರದಿ ಮಾಡಿಕೊಳ್ಳಬೇಕಿತ್ತು. ಜ.13ರಂದು ಮಧ್ಯಾಹ್ನ ಮನೆಯಿಂದ ಹೊರಟ ಅವರ ಮೊಬೈಲ್‌ ನಂತರ ಸ್ವಿಚ್‌ ಆಫ್‌ ಆಗಿದೆ ಎಂದು ತಿಳಿದು ಬಂದಿದೆ.‘ಸದ್ಯ ಅವರು ಎಲ್ಲಿದ್ದಾರೆ ಎಂದು ತಿಳಿದಿಲ್ಲ. ಅವರ ಪತ್ತೆಗೆ ಕ್ರಮವಹಿಸಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಹಿಂದೆಯೂ ಒಮ್ಮೆ ಇದೇ ರೀತಿ ನಾಪತ್ತೆ ಯಾಗಿದ್ದರು ಎಂದು ಪೊಲೀಸ್‌ ಮೂಲಗಳಿಂದ ಮಾಹಿತಿ ಲಭ್ಯವಾಗಿವೆ.ಸದ್ಯ ಕೆಲ ತಂಡಗಳನ್ನು ರಚಿಸಿ ಪೊಲೀಸರು ಹುಡುಕಾಡುತ್ತಿದ್ದಾರೆ.ಸದ್ಯ ಇದೀಗ ಅವರ ಮೊಬೈಲ್ ಲೊಕೇಶನ್ ಆಧಾರದ ಮೇಲೆ ಹುಡುಕಾಟ ನಡೆಸಲಾಗುತ್ತಿದೆ.ಈ ಹಿನ್ನಲೆ ಇಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತಂಡ ತೆರಳಿದೆ ಎಂದು ತಿಳಿದು ಬಂದಿದೆ.

Related posts

ʼಕಾಂತಾರʼ ಪಂಜುರ್ಲಿ ದೈವವನ್ನು ಅವಹೇಳನ ಮಾಡಿದ ಸಾಂತಾಕ್ಲಾಸ್..! ವಿಡಿಯೋ ವೈರಲ್‌

Menstrual cup: ‘ಮೈತ್ರಿ ಮುಟ್ಟಿನ ಕಪ್ ಯೋಜನೆ’ಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ;ಚಿತ್ರನಟಿ ಸಪ್ತಮಿ ಗೌಡ ಭಾಗಿ

ಕಾಂತಾರ ಸಿನಿಮಾದಲ್ಲಿ ಶಿವನನ್ನು ಬಂಧಿಸಿದ್ದ ಜೈಲು ನೆಲಸಮಗೊಳಿಸಿಲು ಆದೇಶ..!ಉಡುಪಿ ನಗರಸಭೆ ಈ ನಿರ್ಧಾರ ಕೈಗೊಂಡಿದ್ಯಾಕೆ..?