ಕರಾವಳಿಕ್ರೈಂವೈರಲ್ ನ್ಯೂಸ್

ಬಂಟ್ವಾಳ: ದೇವಸ್ಥಾನದ ಬಳಿ ನೇತ್ರಾವತಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು..! ಜೊತೆಗೆ ತೆರಳಿದ್ದ ಸ್ನೇಹಿತರು ಹೇಳಿದ್ದೇನು..?

ನ್ಯೂಸ್ ನಾಟೌಟ್: ಯುವಕನೋರ್ವ ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟ ಘಟನೆ ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಸೋಮವಾರ ಸಂಜೆ(ಮಾ.19) ನಡೆದಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಶ್ವ (30) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಲೋಹಿತಾಶ್ವ ತನ್ನ ನಾಲ್ವರು ಸ್ನೇಹಿತರ ಜೊತೆ ಈಜಲೆಂದು ಶಂಭೂರಿಗೆ ಬಂದಿದ್ದರು.

ಸ್ನೇಹಿತರು ಸ್ನಾನ ಮಾಡಲು ನದಿಗೆ ಇಳಿದಿದ್ದರೆ, ಲೋಹಿತಾಶ್ವ ಮಾತ್ರ ನದಿ ಕಿನಾರೆಯಲ್ಲೇ ಕುಳಿತಿದ್ದರು. ಬಳಿಕ ಕಾರಿನ ಬಳಿ ತೆರಳುವುದಾಗಿ ಹೇಳಿ ಹೋಗಿದ್ದರು. ಆದರೆ ಸ್ನೇಹಿತರು ಸ್ನಾನ ಮುಗಿಸಿ ಬರುವ ವೇಳೆ ಲೋಹಿತಾಶ್ವ ಕಾರಿನ ಬಳಿ ಇಲ್ಲಲಿಲ್ಲ ಈ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಅವರು ನೀರಿನಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಜೊತೆಗಿದ್ದ ಸ್ನೇಹಿತರು ಪೊಲೀಸರಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಕೈಯಲ್ಲಿ ವಾಚ್ ಹಾಗೂ ಬಟ್ಟೆ ಧರಿಸಿದ್ದ ಸ್ಥಿತಿಯಲ್ಲಿ ಲೋಹಿತಾಶ್ವರ ಮೃತದೇಹ ಕಂಡುಬಂದಿದ್ದರಿಂದ ನದಿಗೆ ಸ್ನಾನ ಮಾಡಲು ಇಳಿದಿರುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಬಿದ್ದ ವೇಳೆ ಅವರ ತಲೆಗೆ ಗಾಯಗಳಾಗಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಲೋಹಿತಾಶ್ವರ ಜೊತೆಗಿದ್ದ ಸ್ನೇಹಿತರನ್ನು ತನಿಖೆ ನಡೆಸಿ ಸ್ಪಷ್ಟವಾದ ಮಾಹಿತಿ ಪಡೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow us for more updates:

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut Website :https://newsnotout.com/

Related posts

ಸಾಮಾಜಿಕ ಜಾಲತಾಣದಲ್ಲಿ ಬ್ಲೂ ಟಿಕ್ ಮಾರ್ಕ್ ಕಳೆದುಕೊಂಡ ಪ್ರಜ್ವಲ್ ರೇವಣ್ಣ..! ಇಲ್ಲಿದೆ ಸಂಪೂರ್ಣ ಮಾಹಿತಿ

ಮಡಿಕೇರಿ : ಮಗನನ್ನೇ ಗುಂಡಿಕ್ಕಿ ಕೊಂದ ತಂದೆ! ಕಾರಣ ನಿಗೂಢ !

ಆಲೆಟ್ಟಿ : ಸುಳ್ಯ ವಲಯದ ಅರಣ್ಯ ಇಲಾಖೆ ವತಿಯಿಂದ ಸರ್ಕಾರಿ ಶಾಲೆಯಲ್ಲಿ ವನ ಮಹೋತ್ಸವ, ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ