ಕರಾವಳಿಕೊಡಗು

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್‌. ರವಿ ಕುಮಾರ್,ಸಿಇಒ ಡಾ. ಕುಮಾರ್ ದಿಢೀರ್ ವರ್ಗಾವಣೆ

255

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್‌. ರವಿ ಕುಮಾರ್ ವರ್ಗಾವಣೆಗೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸ್ನೇಹಿ ಕಾರ್ಯ ನಿರ್ವಹಿಸಿದ್ದರು. ಬೆಂಗಳೂರಿನ ಸ್ಮಾರ್ಟ್‌ ಗವರ್ನೆನ್ಸ್‌ ಸೆಂಟರ್‌ನ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಆಗಿದ್ದ ಮುಲ್ಲಯಿ ಮುಹಿಲನ್‌ ಅವರು ಮಂಗಳೂರಿನ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಇವರ ಆಡಳಿತ ಅವಧಿಯಲ್ಲಿ ಹಲವಾರು ಸಮಸ್ಯೆಗಳನ್ನು ತುರ್ತಾಗಿ ಬಗೆ ಹರಿಸಿದ್ದಾರೆ. ಸದ್ಯ ಇಂತಹ ಜಿಲ್ಲಾಧಿಕಾರಿಯ ಅವಶ್ಯಕತೆ ದಕ್ಷಿಣ ಕನ್ನಡಕ್ಕೆ ಮತ್ತೊಮ್ಮೆ ಬೇಕಾಗಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಕುಮಾರ್ ಅವರು ಕೂಡ ವರ್ಗಾವಣೆಯಾಗಿದ್ದರು. ಡಾ. ಕುಮಾರ್ ಅವರು ಮಂಡ್ಯ ಜಿಲ್ಲಾಧಿಕಾರಿಯಾಗಿ ನೇಮಗೊಂಡಿದ್ದಾರೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

See also  ಸುಳ್ಯ:ಕೆವಿಜಿ ಮೆಡಿಕಲ್ ಕಾಲೇಜಿನ ಡಯಾಲಿಸಿಸ್ ಘಟಕಕ್ಕೆ ನೂತನ 4 ಮೆಷಿನ್‌ಗಳ ಸೇರ್ಪಡೆ!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget