ಕರಾವಳಿಕೊಡಗು

ಸುಬ್ರಹ್ಮಣ್ಯ:ಭಾರತ ಕ್ರಿಕೆಟ್‌ ತಂಡದ ಆಟಗಾರ ಕೆ.ಎಲ್.ರಾಹುಲ್ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ

ನ್ಯೂಸ್ ನಾಟೌಟ್ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರತ ಕ್ರಿಕೆಟ್‌ ತಂಡದ ಆಟಗಾರ ಕೆ.ಎಲ್.ರಾಹುಲ್ ಸ್ನೇಹಿತರೊಂದಿಗೆ ಭೇಟಿ ನೀಡಿದರು. ಈ ವೇಳೆ ದೇವರ ದರ್ಶನ ಪಡೆದರು.

ದೇವಳದ ಅರ್ಚಕರು ರಾಹುಲ್ ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.ಈ ಸಂದರ್ಭ ಕ್ರಿಕೆಟಿಗ ಕೆ.ಎಲ್ . ರಾಹುಲ್ ಅವರು ದೇವರ ದರ್ಶನ ಪಡೆದು ಸೇವೆ ನೆರವೇರಿಸಿ ಪ್ರಸಾದ ಸ್ವೀಕರಿಸಿದರು.ಬಳಿಕ ಹೊಸಳಿಗಮ್ಮನ ದರ್ಶನ ಪಡೆದರು.ಆಡಳಿತ ಕಚೇರಿಗೆ ಭೇಟಿ ನೀಡಿದ ರಾಹುಲ್ ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದರು.ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್. ಮತ್ತು ರಾಹುಲ್ ಅವರ ಸ್ನೇಹಿತರು ಉಪಸ್ಥಿತರಿದ್ದರು

Related posts

ಕಲ್ಲುಗುಂಡಿಯಲ್ಲಿ 10 ಅಡಿ ಉದ್ದದ ಹೆಬ್ಬಾವು ಸೆರೆ, ಪ್ರಿಡ್ಜ್ ಅಡಿಯಲ್ಲಿ ಮಲಗಿದ್ದ ಹೆಬ್ಬಾವನ್ನು ಸೆರೆ ಹಿಡಿದದ್ದು ಹೇಗೆ..?

ರಾಜ್ಯದ ಪ್ರಖ್ಯಾತ ಪ್ರವಾಸಿ ನಗರದಲ್ಲಿ ಗಡಗಡ ನಡುಗಿದ ಭೂಮಿ..! ಮತ್ತೊಮ್ಮೆ ಭೂಕಂಪದ ಆತಂಕದಲ್ಲಿ ಜನತೆ..!

ಕರಾವಳಿಯಲ್ಲಿ ಇಬ್ಬರನ್ನು ಬಲಿ ಪಡೆದ ಧಾರಾಕಾರ ಮಳೆ!, ಹಲವೆಡೆ ಅಪಾರ ಹಾನಿ, ಮರಬಿದ್ದು ವಿದ್ಯಾರ್ಥಿನಿ ಸಾವು