ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ, ಹಲವು ಮಾದಕ ವಸ್ತುಗಳು ಪತ್ತೆ

ನ್ಯೂಸ್ ನಾಟೌಟ್: ಮಂಗಳೂರು ನಗರದ ಕೊಡಿಯಾಲಬೈಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ ಮಾಹಿತಿ ಹಿನ್ನಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ತಪಾಸಣೆ ವೇಳೆ ಬೀಡಿ, ಸಿಗರೇಟ್, ಪಾನ್ ಮಸಾಲ, ಗುಟ್ಕಾ ಪತ್ತೆಯಾಗಿದೆ.

ಜಿಲ್ಲಾ ಕಾರಾಗೃಹಕ್ಕೆ ದಿಢೀರನೆ ದಾಳಿ ನಡೆಸಿದ ಸುಮಾರು 300 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸತತ 1 ಗಂಟೆ 15 ನಿಮಿಷಗಳ ಕಾಲ ಕಾರಾಗೃಹ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಮಸಾಲಾ ಪತ್ತೆಯಾಗಿದ್ದು, ದಾಳಿಯ ಮಾಹಿತಿ ಕೈದಿಗಳಿಗೆ ಮೊದಲೇ ತಲುಪಿರುವ ಶಂಕೆ ವ್ಯಕ್ತವಾಗಿದೆ. ಜೈಲಿನಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ನಿರ್ಧರಿಸಿರುವ ಪೊಲೀಸರು, ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಆರ್.ಜೈನ್ ನೇತೃತ್ವದಲ್ಲಿ ನಡೆದ ದಾಳಿ ಇದಾಗಿದ್ದು, ಡಿಸಿಪಿ, ಎಸಿಪಿ, ಇನ್​ಸ್ಪೆಕ್ಟರ್, ಪಿಎಸ್​ಐ ಸೇರಿದಂತೆ 300ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಬಳಿಕ ಮಾತನಾಡಿದ ಪೊಲೀಸ್ ಆಯುಕ್ತ ಕುಲದೀಪ್​​​ ಜೈನ್, ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಜೈಲಿನಲ್ಲಿ ಪರಿಶೀಲನೆ ನಡೆಸಿದ್ದೇವೆ. ಆದರೆ ತಪಾಸಣೆ ವೇಳೆ ಬೀಡಿ, ಸಿಗರೇಟ್​​, ತಂಬಾಕು ಬಿಟ್ಟು ಬೇರೇನು ಸಿಕ್ಕಿಲ್ಲ. ಮುಂದಿನ ದಿನಗಳಲ್ಲೂ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ ಎಂದರು.

Related posts

ಉಪ್ಪಿನಂಗಡಿ: ಸಿಬಿಐ ಆಫೀಸರ್ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ..! ಮಗನ ಹೆಸರು ಹೇಳಿ ವ್ಯಕ್ತಿಯಿಂದ ಹಣ ಸುಳಿಗೆಗೆ ಯತ್ನ..!

‘ಕಾಂಗ್ರೆಸ್ ನಾಯಕರೇ ನಿಮಗೆ10 ಕೆ.ಜಿ ಅಕ್ಕಿ ಕೊಡಲು ಆಗದಿದ್ದರೆ ಕ್ಷಮೆ ಕೇಳಿ’ ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹ

ಆರೋಗ್ಯ ಸ್ಥಿರ, ಸಿಟಿ ಸ್ಕ್ಯಾನ್‌ ಕೂಡ ನಾರ್ಮಲ್‌, ಆದ್ರೂ ಡಿಸ್ಚಾರ್ಜ್‌ ಆಗೊಲ್ಲ ಅಂತಾಳೆ ಚೈತ್ರಾ ಕುಂದಾಪುರ! ಚೈತ್ರಾ ಕುಂದಾಪುರ ಹೈಡ್ರಾಮಾಕ್ಕೆ ಕಾರಣವೇನು?