ಕರಾವಳಿದಕ್ಷಿಣ ಕನ್ನಡದೈವಾರಾಧನೆಮಂಗಳೂರುವೈರಲ್ ನ್ಯೂಸ್ಸಿನಿಮಾ

ದೈವಗಳ ಅಭಯ ಪಡೆದ ಕೆ.ಜಿ.ಎಫ್ ಬೆಡಗಿ, ದೈವಗಳಿಗೆ ನೇಮ ನೀಡುವುದಾಗಿ ಹರಕೆ ಹೊತ್ತಿದ್ದೇಕೆ ನಟಿ..?

235

ನ್ಯೂಸ್ ನಾಟೌಟ್: ಕನ್ನಡದ ಪ್ಯಾನ್ ಇಂಡಿಯಾ ಬ್ಲಾಕ್ ​ಬಸ್ಟರ್ ಸಿನಿಮಾ ‘ಕೆಜಿಎಫ್’​​​​ನಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ನಾಯಕಿ ನಟಿಯಾಗಿ ನಟಿಸಿ ಸಾಕಷ್ಟು ಜನಪ್ರಿಯರಾಗಿರುವ ಶ್ರೀನಿಧಿ ಶೆಟ್ಟಿ ಕರಾವಳಿಯ ದೈವ ಕೋಲದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ.

ಮಂಗಳೂರಿನ ಹೊರವಲಯದ ಕಿನ್ನಿಗೋಳಿಯಲ್ಲಿರುವ ನಟಿ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ಹರಕೆ ನೇಮ ನಡೆಯಿತು ಎಂದು ವರದಿ ತಿಳಿಸಿದೆ. ಶ್ರೀನಿಧಿ ಶೆಟ್ಟಿ ಈ ಹಿಂದೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕುಟುಂಬ ದೈವಗಳಾದ ಜಾರಂದಾಯ, ಬಂಟ ಹಾಗೂ ಪರಿವಾರ ದೈವಗಳಿಗೆ ನೇಮ ನೀಡುವುದಾಗಿ ಹರಕೆ ಹೊತ್ತಿದ್ದರು. ಇದೀಗ ತಾಳಿಪಾಡಿಗುತ್ತುವಿಗೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ನೇಮದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಯಶಸ್ಸಿನ ಹಿಂದೆ ಕುಟುಂಬದ ದೈವಗಳ ಆಶೀರ್ವಾದವಿದ್ದು, ಇಷ್ಟಾರ್ಥ ಸಿದ್ಧಿಗಾಗಿ ಈ ಹರಕೆ ಕೋಲ ಸಲ್ಲಿಸಿದ್ದಾರೆ. ನೇಮದ ವೇಳೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿ ಎಂದು ದೈವಗಳು ನಟಿಗೆ ಅಭಯ ನೀಡಿವೆ ಎನ್ನಲಾಗಿದೆ.

See also  ರಸ್ತೆ ದಾಟುತ್ತಿದ್ದ ಬಾಲಕಿಗೆ ಚುನಾವಣಾ ಪ್ರಚಾರದ ಕಾರು ಡಿಕ್ಕಿ,ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget