Uncategorized

ಮಗಳಿಗೆ ಹೊಸ ‘ದುನಿಯಾ’ ತೋರಿಸಿದ ಅಪ್ಪ..!ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗುತ್ತಿದ್ದಾರೆ ಮೋನಿಕಾ ವಿಜಯ್..!

ನ್ಯೂಸ್ ನಾಟೌಟ್ : ತಂದೆ-ಮಗಳ ಬಾಂಧವ್ಯಕ್ಕೆ ಬೆಲೆ ಕಟ್ಟಲಸಾಧ್ಯ.ಮಗಳಿಗೆ ತಂದೆಯೇ ಪ್ರಪಂಚವಾದರೆ ..ಇತ್ತ ಅಪ್ಪನಿಗೂ ಮಗಳ ಮೇಲೆಯೇ ಒಲವು ಜಾಸ್ತಿ.ಆಕೆ ಹುಟ್ಟಿದ ಕ್ಷಣದಿಂದ, ಅವಳು ತಂದೆಯ ಚಿಕ್ಕ ದೇವತೆಯಾಗುತ್ತಾಳೆ. ಬೆಳೆದು ಮದುವೆಯಾದಾಗಲೂ ತನ್ನ ತಂದೆಯ ಹೃದಯದಲ್ಲಿ ವಿಶೇಷವಾಗಿ ಉಳಿಯುತ್ತಾಳೆ.ಈ ಮಾತನ್ನೇಕೆ ಹೇಳುತ್ತಿದ್ದೆವೆಂದ್ರೆ ಅಂದು ದುನಿಯಾ ವಿಜಯ್ ಮಗಳು ‘ಅಪ್ಪ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆಂದು’ ಅಪ್ಪನ ವಿರುದ್ದವೇ ಪೊಲೀಸ್ ಕಂಪ್ಲೆಂಟ್‌ ನೀಡಿದ್ದಳು.ಇದೀಗ ಅದೇ ಮಗಳಿಗೆ ದುನಿಯಾ ವಿಜಯ್ ಹೊಸ ದುನಿಯಾವನ್ನು ತೋರಿಸಲು ಮುಂದಾಗಿದ್ದಾರೆ.ಹೌದು,ಸ್ಯಾಂಡಲ್​ವುಡ್​ ನಟ ದುನಿಯಾ ವಿಜಯ್ ಪುತ್ರಿಯರು ಯಾವ ಹಿರೋಯಿನ್‌ಗಿಂತಲೂ ಕಡಿಮೆ ಇಲ್ಲ.ಎಷ್ಟೊಂದು ಮುದ್ದಾಗಿದ್ದಾರೆ ಅನ್ನುವ ಪೋಸ್ಟ್‌ ಈ ಹಿಂದೆ ವೈರಲ್ ಆಗಿತ್ತು.ಆ ಮಾತು ಈಗ ನಿಜವಾಗಿದೆ.ಎಲ್ಲರೂ ಅಂದು ಕೊಂಡ ಹಾಗೆ ದುನಿಯಾ ವಿಜಯ್ ಪುತ್ರಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ..!


ದುನಿಯಾ ವಿಜಯ್​ ಅವರು ತನ್ನ ದೊಡ್ಡ ಮಗಳು ಸ್ಯಾಂಡಲ್​ವುಡ್​ಗೆ ಪರಿಚಯ ಮಾಡಿಸುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಮಗಳ ಸಿನಿಮಾದಲ್ಲಿ ಅಪ್ಪ ದುನಿಯಾ ವಿಜಯ್ ಕೂಡ ನಟಿಸುತ್ತಿದ್ದಾರೆ. ಈ ಸುದ್ದಿ ಇದೀಗ ಗಾಂಧಿ ನಗರ ಗಲ್ಲಿಯಲ್ಲಿ ಹರಿದಾಡುತ್ತಿದೆ.ಇದು ಅಚ್ಚರಿಗೂ ಕಾರಣವಾಗಿದೆ. ಯಾಕೆಂದರೆ ೨೦೧೮ರಲ್ಲಿ ಮಗಳು ಮೋನಿಕಾ ಅಪ್ಪನ ವಿರುದ್ಧವೇ ಪೊಲೀಸ್ ದೂರು ನೀಡಿದ್ದಳು. ಅಪ್ಪ ಮನೆಗೆ ಬಂದಾಗ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದರು ಎಂದು ಮೋನಿಕಾ ಆರೋಪ ಮಾಡಿದ್ದಳು. ತಂದೆ ದುನಿಯಾ ವಿಜಯ್, ಚಿಕ್ಕಮ್ಮ ಕೀರ್ತಿ ಗೌಡ ಹಾಗೂ ವಿಜಿ ಕಾರ್ ಡ್ರೈವರ್ ಸೇರಿದಂತೆ ಐದು ಜನರ ವಿರುದ್ಧ ದೂರು ದಾಖಲಾಗಿತ್ತು.ಇದನ್ನು ದುನಿಯಾ ವಿಜಯ್‌ ಅವರು ಅಲ್ಲಗಳೆದಿದ್ದರು.ಇದು ಯಾರದ್ದೋ ಕುತಂತ್ರ ಎಂದು ಹೇಳಿದ್ದರು.ಬಳಿಕ ಆ ವಿವಾದಗಳಿಗೆ ಒಂದು ಹಂತಕ್ಕೆ ತೆರೆ ಬಿತ್ತು.ಇದೀಗ ದುನಿಯಾ ವಿಜಯ್ ಅವರು ಅದೇ ಮಗಳೊಂದಿಗೆ ಅಪ್ಪನ ಪಾತ್ರದಲ್ಲಿ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ.


ಸದ್ಯ ಇದೀಗ ತಂದೆ-ಮಗಳ ನಟನೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.ಮೋನಿಕಾ ವಿಜಯ್​ ಅವರು ಸಿನಿಮಾಗೂ ಬರುವ ಮುನ್ನ ಸಾಕಷ್ಟು ತಯಾರಿ ನಡೆಸಿಕೊಂಡೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾಗೆ ಹೆಜ್ಜೆ ಇಡುವ ಮೊದಲೇ ರಂಗಭೂಮಿಯಲ್ಲಿ ನಟನೆ ಕಲಿತು ಬಂದಿದ್ದಾರೆ.


ದುನಿಯಾ ವಿಜಯ್​ ಮಗಳ ಸಿನಿಮಾದಲ್ಲಿ ಅಪ್ಪನ ಪಾತ್ರವನ್ನು ಮಾಡುತ್ತಿದ್ದು,ವಿಭಿನ್ನವಾಗಿ ಕಾಣಿಸಿಕೊಳ್ಳಲು ಸಿದ್ದರಾಗಿದ್ದಾರೆ.ಇನ್ನು ಮೋನಿಕಾ ವಿಜಯ್​ ಅವರು ಜಡೇಶ್ ಹಂಪಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಇದಲ್ಲದೆ, ಮೋನಿಕಾ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್​ ಸಹ ಮುಗಿಸಿ ಬಂದಿದ್ದಾರೆ. ಮುಂಬೈನ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಬಂದಿದ್ದಾರೆ.ಸದ್ಯ ದುನಿಯಾ ವಿಜಯ್ ಮಗಳು ಚೊಚ್ಚಲ ಸಿನಿಮಾದಲ್ಲಿ ಯಾವ ರೀತಿ ಆ್ಯಕ್ಟಿಂಗ್ ಮಾಡುತ್ತಾರೆ.ಇವರಿಬ್ಬರು ಹೇಗೆ ಕಾಣಿಸಿಕೊಳ್ಳುತ್ತಾರೆ.ಅಪ್ಪ-ಮಗಳ ಜುಗಲ್‌ಬಂಧಿ ಹೇಗಿರಲಿದೆ ?ಅನ್ನೋದಕ್ಕೆ ನೀವು ಸ್ವಲ್ಪ ದಿನ ಕಾಯಲೇ ಬೇಕಾಗಿದೆ.

https://www.youtube.com/watch?v=yj8eWTL1Q0U&t=61s

Related posts

ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಬಾಂಗ್ಲಾ ಪತ್ರಕರ್ತೆಯ ಮೃತದೇಹ ಕೆರೆಯಲ್ಲಿ ಪತ್ತೆ..! ಆ ನಿಗೂಢ ‘ಫೇಸ್ ಬುಕ್’ ಪೋಸ್ಟ್ ಗಳಲ್ಲೇನಿದೆ..?

ಮಹಿಳೆಯರಿಗೆ ಟಾಪ್‌ಲೆಸ್‌ ಸ್ವಿಮ್ಮಿಂಗ್‌ ಗೆ ಅನುಮತಿ ನೀಡಿದ ಸರ್ಕಾರ..! ಯಾವುದು ಆ ದೇಶ?