ಕರಾವಳಿ

ದಬ್ಬಡ್ಕದಲ್ಲಿ ಜಲಸ್ಫೋಟ, ಭಾರಿ ನೀರು, ಜನ ಜೀವನ ತತ್ತರ

558

ನ್ಯೂಸ್ ನಾಟೌಟ್ : ಪಯಸ್ವಿನಿ ನದಿಯಲ್ಲಿ ದಿಢೀರ್  ಪ್ರವಾಹ ಏರುವುದಕ್ಕೆ ಜಲಸ್ಫೋಟ ಕಾರಣ ಎಂದು ಅಂದಾಜಿಸುತ್ತಿರುವ ಬೆನ್ನಲ್ಲೇ ಇದೀಗ ಕೊಡಗಿನ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಜಲಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

ರಾತ್ರಿ ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಏರಿದ್ದು ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ನೀರು ಗುಡ್ಡವನ್ನು ಕೊರೆದುಕೊಂಡು ಹರಿದು ಬಂದಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಹಲವಾರು ಮನೆಗಳು ಸಂಪರ್ಕವನ್ನೇ ಕಳೆದುಕೊಂಡಿರುವ ಸಾಧ್ಯತೆ ಇದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ದಬ್ಬಡ್ಕದ ಕೊಪ್ಪ ಎಂಬಲ್ಲಿ ಸಾಕಷ್ಟು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

See also  ಬಾಲಕ ಹಠಾತ್ ನಾಪತ್ತೆ, ಬಾಲಕನಿಗಾಗಿ ಪೋಷಕರಿಂದ ತೀವ್ರ ಹುಡುಕಾಟ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget