ಕ್ರೀಡೆ/ಸಿನಿಮಾವೈರಲ್ ನ್ಯೂಸ್

ದರ್ಶನ್ ಮತ್ತು ಮಾಧ್ಯಮಗಳ ನಡುವಿನ 2 ವರ್ಷದ ಸುದೀರ್ಘ ಮುನಿಸು ಕೊನೆಗೊಂಡದ್ದು ಹೇಗೆ? ಅಷ್ಟಕ್ಕೂ ದರ್ಶನ್ ಬರೆದ ಆ ಪತ್ರದಲ್ಲೇನಿದೆ? ಆ ಒಂದು ಮೀಟಿಂಗ್ ನೀಡಿದ ತಿರುವೇನು?

ನ್ಯೂಸ್ ನಾಟೌಟ್ : ಸ್ಯಾಂಡಲ್​ವುಡ್ (Sandalwood)​ ಸ್ಟಾರ್ ಡಿ ಬಾಸ್ (D Boss) ದರ್ಶನ್ (Darshan) ಹಾಗೂ ಮೀಡಿಯಾ ಮಧ್ಯೆ ಇರುವ ಮುನಿಸು ಸ್ವಲ್ಪ ದೀರ್ಘ ಕಾಳ ಮುಂದುವರೆದಿತ್ತು. ಮೀಡಿಯಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಇದ್ದಂತಹ ಕಹಿ ಮುನಿಸು ಕೊನೆಗೂ ಅಂತ್ಯ ಕಂಡಿದೆ. ಚಾಲೆಂಜಿಂಗ್ ಸ್ಟಾರ್ ಈ ಬಗ್ಗೆ ಕ್ಷಮೆ ಕೇಳಿದ್ದು ಮಾಧ್ಯಮದ ಮಂದಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ಈ ಮೂಲಕ ತಿಳಿಸಿದ್ದಾರೆ.

ದರ್ಶನ್ ಇನ್​ಸ್ಟಾಗ್ರಾಮ್​ನಲ್ಲಿ ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದು ಅದಕ್ಕೆ ಸಮಸ್ತ ಕರ್ನಾಟಕ ಜನತೆಗೆ ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಕ್ಯಾಪ್ಶನ್ ಬರೆದಿದ್ದಾರೆ. ಇದರೊಂದಿಗೆ ಒಂದು ಪತ್ರದ ಫೋಟೋ ಕೂಡಾ ಶೇರ್ ಮಾಡಿದ್ದು ವಿಶೇಷವಾಗಿದೆ.

ಕಳೆದ ಸುಮಾರು ಎರಡು ವರ್ಷಗಳಿಂದ ನನ್ನ ಹಾಗೂ ಕನ್ನಡ ಮಾಧ್ಯಮ ಮಿತ್ರರ ನಡುವೆ ಒಂದು ಕಂದಕ ಉಂಟಾಗಿತ್ತು. ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನ ಮಿತ್ರ ರಾಕ್​ಲೈನ್ ವೆಂಕಟೇಶ್ ನೇತೃತ್ವದಲ್ಲಿ ನನ್ನ ಹಾಗೂ ಕನ್ನಡದ ಪ್ರಮುಖ ಮಾಧ್ಯಮಗಳ ಸಂಪಾದಕರ ನಡುವೆ ಮಾತುಕತೆ ನಡೆದು ಇಡೀ ಪ್ರಕರಣ ಸುಖಾಂತ್ಯಗೊಂಡಿದೆ.
ಕೆಲ ವರ್ಷಗಳ ಹಿಂದಿನ ನನ್ನಾಡಿಯೋ ಒಂದು ದುರುದ್ದೇಶಪೂರ್ವಕವಾಗಿ ವೈರಲ್ ಆಗಿ ಇಡೀ ವಿವಾದಕ್ಕೆ ಕಾರಣವಾಗಿತ್ತು.

ಅದು ಯಾವುದೋ ವಿಷಮ ಘಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆಯಾಗಿತ್ತು. ಅದು ಮಾಧ್ಯಮದ ಇತರ ವ್ಯಕ್ತಿಗಳನ್ನು ಕುರಿತು ಆಡಿದ ಮಾತಾಗಿರಲಿಲ್ಲ. ಆವ್ಯಕ್ತಿ ಯಾವ ದುರುದ್ದೇಶದಿಂದ ಮಾಡಿದರು ಗೊತ್ತಿಲ್ಲ. ಆದರೂ ಆ ವ್ಯಕ್ತಿಗೆ ಒಳ್ಳೆಯದಾಗಲಿ. ಮುಂದೆ ಆ ವ್ಯಕ್ತಿ ಈ ರೀತಿಯ ದುರುದ್ದೇಶವನ್ನು ಮರುಕಳಿಸದಿರಲಿ.
ಆದರೂ ಅಂತಹ ಮಾತಿನಿಂದ ನೋವುಂಟಾಗಿದ್ದರೆ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರುವುದರಲ್ಲಿ ತಪ್ಪಿಲ್ಲ. ಈ ಅಯಾಚಿತ ಘಟನೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ರಂಗದ ಕ್ಷಮೆ ಇರಲಿ. ಒಂದು ಉತ್ತಮವಾದ ಸಮಾಜಕ್ಕೆ ಒಳ್ಳೆಯ ಮಾಧ್ಯಮದ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.
ನನಗೂ ಮಾಧ್ಯಮಗಳ ಬಗ್ಗೆ ಗೌರವವಿದೆ. ಚಿತ್ರರಂಗದ ನನ್ನ ಬೆಳವಣಿಗೆಯಲ್ಲಿ ಮಾಧ್ಯಮದ ಪ್ರೀತಿಯಿಂದ ನೀಡಿದ ಪ್ರಚಾರ ಪಾಲೂ ಸಾಕಷ್ಟಿದೆ. ಈ ಹಿಂದೆ ಆಗಿರುವ ಕಹಿ ಘಟನೆಯನ್ನು ಮರೆತು ನಾವೆಲ್ಲ ಮುಂದೆ ಸಾಗೋಣ.

ಕನ್ನಡ, ಕನ್ನಡಿಗರು, ಕನ್ನಡ ನೆಲ ಜಲ, ಕನ್ನಡ ಚಿತ್ರರಂಗದ ಪ್ರಗತಿಗೆ ಜೊತೆಯಾಗಿ ಕೆಲಸ ಮಾಡೋಣ. ಪ್ರೀತಿಯಿರಲಿ. ನನ್ನ ಪ್ರೀತಿಯ ಸೆಲೆಬ್ರಿಟಿಗಳು ನನ್ನ ಭಾವನೆಯನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡ ಪತ್ರವನ್ನು ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Related posts

ನಮ್ಮಜ್ಜಿಗೆ ನೀವು ಯಾರೂಂತ ತಿಳಿದಿದೆ “ಡಾ.ಬ್ರೋ”ರನ್ನು ಹಾಡಿ ಹೊಗಳಿದ ನಟ ..!, ‘ನಿಮ್ಮ ಅಮ್ಮ ಹಾಗೂ ಅಜ್ಜಿಗೆ ಡಾ.ಬ್ರೋ ಗೊತ್ತಾ?’ ಪ್ರಶ್ನೆಗೆ ಟಾಂಗ್ ನೀಡಿದ್ರಾ ಚಂದನ್..ಏನಿದು ವಿವಾದ?

ತಿರುಮಲದಲ್ಲಿ ಮತ್ತೆ ರಾತ್ರೋರಾತ್ರಿ ಚಿರತೆ, ಕರಡಿ ಪ್ರತ್ಯಕ್ಷ? ಭಕ್ತರಿಗೆ ದೇವಸ್ಥಾನದ ಟ್ರಸ್ಟ್ ನೀಡಿದ ಎಚ್ಚರಿಕೆ ಏನು..? ಸಂಚಾರ ನಿಯಮದಲ್ಲಿ ತಂದ ಬದಲಾವಣೆ ಏನು?

ಕೊಲೆ ಆಗಿದ್ದ ಬಾಲಕ ಸುಪ್ರೀಂಕೋರ್ಟ್‌ ಮುಂದೆ ಹಾಜರಾಗಿ ಬದುಕಿದ್ದೇನೆ ಎಂದದ್ದೇಗೆ..! ಆತನ ತಂದೆ ಮಾಡಿದ ಆ ಒಂದು ತಪ್ಪೇನು?