ಕರಾವಳಿ

Cyclone Biparjoy: ಅರಬ್ಬಿ ಸಮುದ್ರದಲ್ಲಿ ಸೈಕ್ಲೋನ್ ಅಬ್ಬರ, ಕೆಲವೇ ಗಂಟೆಗಳಲ್ಲಿ ಅಪಾಯದ ಮುನ್ಸೂಚನೆ, ಗಂಟೆಗೆ ಎಷ್ಟು ಕಿ.ಮೀ. ವೇಗದಲ್ಲಿ ಬರ್ತಿದೆ ಗೊತ್ತಾ?

238

ನ್ಯೂಸ್ ನಾಟೌಟ್: ಬಿಪರ್​ಜಾಯ್​ ಸೈಕ್ಲೋನ್​ ಅಬ್ಬರ ಅರಬ್ಬಿ ಸಮುದ್ರದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಈ ಸೈಕ್ಲೋನ್​ನಿಂದಾಗಿ ಕಡಲ ಅಲೆಗಳು ರಭಸ ಹೆಚ್ಚಾಗಿದ್ದು ಮುಂಜಾಗೃತ ಕ್ರಮದ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಸಂಕಷ್ಟದಲ್ಲಿದ್ದ 37,794 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.

ಬಿಪರ್​ಜಾಯ್​ ಸೈಕ್ಲೋನ್​ ಕುರಿತಾಗಿ ಗುಜರಾತ್​​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೈಕ್ಲೋನ್​​ ಅಬ್ಬರದಿಂದ ಹಾನಿಯನ್ನು ತಡೆಯಲು ಮತ್ತು ಸೋಮನಾಥ, ದ್ವಾರಕಾ ದೇವಾಲಯಗಳ ರಕ್ಷಿಸಲು ಸಿಎಂ ಭೂಪೇಂದ್ರ ಪಟೇಲ್ ಸೂಚಿಸಿದ್ದಾರೆ. ಇದರೊಂದಿಗೆ ಗಿರ್ ಅರಣ್ಯದ ವನ್ಯಜೀವಿಗಳು, ಮರಗಳನ್ನು ರಕ್ಷಿಸಲು ಸೂಚನೆ ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೈಕ್ಲೋನ್ ಹಾನಿ‌ ತಡೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಸೈಕ್ಲೋನ್​​ನಿಂದ ಯಾರೊಬ್ಬರು ಸಾವನ್ನಪ್ಪದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುಜರಾತ್ ರಾಜ್ಯದ ದ್ವಾರಕಾ, ಗಿರ್ ಸೋಮನಾಥ, ಕಛ್ ಜಿಲ್ಲೆಗಳಲ್ಲಿ ಸೈಕ್ಲೋನ್ ನಿಂದ ಹೆಚ್ಚು ಹಾನಿಯ ಮುನ್ಸೂಚನೆ ಇದ್ದು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ನಾಳೆ ಸಂಜೆ ಗುಜರಾತ್ ಜಾಕವೋ ಬಂದರು- ಕರಾಚಿ ಕರಾವಳಿ ಮಧ್ಯೆ ಸೈಕ್ಲೋನ್ ಲ್ಯಾಂಡ್‌ ಫಾಲ್ ಆಗುವ ಮುನ್ಸೂಚನೆ ಬಂದಿದೆ.

ಹವಾಮಾನ ಇಲಾಖೆ ಇಂದು ಗುಜರಾತ್ ರಾಜ್ಯಕ್ಕೆ ಆರೇಂಜ್ ಆಲರ್ಟ್ ನೀಡಿದ್ದು, ನಾಳೆ ರೆಡ್ ಆಲರ್ಟ್ ನೀಡುವುದಾಗಿ ಘೋಷಿಸಿದೆ. ಗಂಟೆಗೆ 135-155 km ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಕೊಟ್ಟಿದೆ. ಕಳೆದ 60 ವರ್ಷದಲ್ಲಿ ಜೂನ್ ತಿಂಗಳಲ್ಲಿ ಗುಜರಾತ್ ರಾಜ್ಯಕ್ಕೆ ಅಪ್ಪಳಿಸುತ್ತಿರುವ ಮೂರನೇ ಸೈಕ್ಲೋನ್ ಇದಾಗಿದೆ.

See also  ಉಡುಪಿ: ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget