ನ್ಯೂಸ್ ನಾಟೌಟ್: ಸೈಕಲ್ ಗೆ ಕಾರು ಢಿಕ್ಕಿ ಹೊಡೆದು ಮಾಜಿ ಯೋಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರಿನ ಲಿಂಗಸುಗೂರು ಮಾರ್ಗದ ರಾಜ್ಯ ಹೆದ್ದಾರಿಯ ಹಳ್ಳದ ಬಸವೇಶ್ವರ ದೇವಸ್ಥಾನದ ಎದುರು ನಡೆದಿದೆ.
ಮೃತರನ್ನು ಮಾಜಿ ಯೋಧ ಶ್ರೀನಿವಾಸ (57) ಎಂದು ಗುರುತಿಸಲಾಗಿದೆ.
ಶ್ರೀನಿವಾಸ್ ಅಸ್ಕಿಹಾಳದಿಂದ ಸೈಕಲ್ ನಲ್ಲಿ ಪವರ್ ಗ್ರಿಡ್ ಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಕಾರು ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಾಗಿದೆ.
7 ವರ್ಷ ಜೈಲು ಶಿಕ್ಷೆಯಿಂದ ಜನಾರ್ದನ ರೆಡ್ಡಿಗೆ ರಿಲೀಫ್..! ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು ಮಂಜೂರು..!
ಸಂಸದ ಮತ್ತು ಇಬ್ಬರು ಶಾಸಕರ ಕಚೇರಿ, ಮನೆಗಳ ಮೇಲೆ ಈ.ಡಿ. ದಾಳಿ..! ಮುಂಜಾನೆ ಏಕಕಾಲಕ್ಕೆ ಹಲವೆಡೆ ದಾಳಿ..!