Latestಕರಾವಳಿ

ಭಾರತದ ಮೇಲೆ ಪಾಕಿಸ್ತಾನಿ ಹ್ಯಾಕರ್​ಗಳ ಕಣ್ಣು!ಮಂಗಳೂರಿನಲ್ಲಿ ಸೈಬರ್ ತಜ್ಞರು ಹೇಳಿದ್ದೇನು?

552

ನ್ಯೂಸ್‌ ನಾಟೌಟ್: ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ವೈಮಾನಿಕ ದಾಳಿ  ನಡೆಸಿದ ಬಳಿಕ ಇದೀಗ ಭಾರತಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಪಾಕಿಸ್ತಾನವು ಸೈಬರ್ ವಾರ್ ನಡೆಸುವ ಆತಂಕದ ವಿಚಾರವಾಗಿ ಸೈಬರ್ ತಜ್ಞರು ಮುನ್ನೆಚ್ಚರಿಕೆಯ ನೀಡಿದ್ದಾರೆ.

ಈ ಕುರಿತು ಮಾಧ್ಯಮವೊಂದಕ್ಕೆ ಮಂಗಳೂರಿನಲ್ಲಿ ಮಾತನಾಡಿರುವ ಸೈಬರ್ ತಜ್ಞ ಡಾ. ಅನಂತ ಪ್ರಭು “ಭಾರತದ ಮೇಲೆ ಪಾಕಿಸ್ತಾನಿ ಹ್ಯಾಕರ್​ಗಳ ಕಣ್ಣಿದ್ದು, ಅನೇಕ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಲು ಯತ್ನಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಸರ್ಕಾರಿ ವೆಬ್​ಸೈಟ್​ಗಳನ್ನೇ ಪಾಕಿಸ್ತಾನಿಯರು ಗುರಿ ಮಾಡುವ ಸಾಧ್ಯತೆ ಇದ್ದು,ದೇಶದ ಪ್ರತಿಯೊಬ್ಬರೂ ಪಾಕಿಸ್ತಾನೀಯರಿಂದ ಎದುರಾಗಬಹುದಾದ ಸಂಭಾವ್ಯ ಸೈಬರ್ ವಾರ್ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದ್ದಾರೆ.

ಭೂ ಸೇನೆ, ನೌಕಾಪಡೆ ಮತ್ತು ವಾಯುಪಡೆ ರೀತಿಯಲ್ಲಿಯೇ ಸೈಬರ್ ವಿಂಗ್ ಕೂಡ ಇದೆ. ಕೃತಕ ಬುದ್ಧಿಮತ್ತೆ ಬಂದಮೇಲೆ ವೈರಸ್ ಸಿದ್ಧಪಡಿಸಿ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡುವ ಸುಲಭವಾಗಿದೆ. ಡಾರ್ಕ್ ವೆಬ್ ಮೂಲಕ ಭಾರತದ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.ಮಾಡುವ ಸಾಧ್ಯತೆ ಹೆಚ್ಚು ಇದೆಯೆಂದು ಹೇಳಿದ್ದಾರೆ.

ಇನ್ನು ಪಾಕಿಸ್ತಾನಿ ಹ್ಯಾಕರ್ ಗಳು ಬೇರೆ ರಾಷ್ಟ್ರಗಳ ಸಹಾಯ ಬಳಸಿ ಕೃತ್ಯ ಎಸಗುವ ಸಾಧ್ಯತೆ ಇದೆ. ಹೀಗಾಗಿ ನಾವು ವೆಬ್​ಸೈಟ್​ ಬಳಸುವ ವೇಳೆ ಯಾವ ದೇಶದ ಸರ್ವರ್ ಇದೆ ಎಂಬುದನ್ನು ಕೂಡ ಗಮನಿಸಿಕೊಳ್ಳಬೇಕು. ಶತ್ರು ರಾಷ್ಟ್ರದ ಸರ್ವರ್ ಇದ್ದರೆ ಅದರ ಮೂಲಕ ದಾಳಿ ಮಾಡುವ ಸಾಧ್ಯತೆ ಹೆಚ್ಚು ಎಂದು ಅವರು ಸುಳಿವು ನೀಡಿದ್ದಾರೆ.ಆದಷ್ಟು ವೆಬ್​ಸೈಟ್​ಗಳ ಸೆಕ್ಯೂರಿಟಿ ಆಡಿಟ್ ಮಾಡಬೇಕು ಎಂದು ಸಲಹೆ ನೀಡಿರುವ ಅವರು, ಸೇನಾಪಡೆಗಳ ಸಿಬ್ಬಂದಿ ಕೂಡ ಈ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿ ಇರಬೇಕು ಎಂದು ಸುಳಿವು ನೀಡಿದ್ದಾರೆ.

ಸೇನಾ ಅಧಿಕಾರಿಗಳಿಗೆ, ಯೋಧರಿಗೆ ಹಾಗೂ ಸಿಬ್ಬಂದಿಗೆ ಯುವತಿಯರ ಮೂಲಕ ವಿಡಿಯೋ ಕಾಲ್ ಮಾಡಿಸಿ ಸ್ಕ್ರೀನ್ ಶೇರ್ ಮೂಲಕ ಮಾಹಿತಿ ಕದಿಯುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಡೇಟಾಗಳು ಕೂಡ ಲೀಕ್ ಆಗುವುದಲ್ಲದೇ ಈ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಡಾ ಅನಂತ ಪ್ರಭು ಹೇಳಿದ್ದಾರೆ.

See also  ಪೊಲೀಸ್ ಠಾಣೆಗೆ ದಾಳಿ ಪ್ರಕರಣ: ಠಾಣೆಗೆ ನುಗ್ಗಿದ ಶಾಸಕರೇ ಆಗಿರಲಿ ಸಂಸದರೇ ಆಗಿರಲಿ, ಯಾರನ್ನೂ ಕೂಡ ಬಿಡುವುದಿಲ್ಲ ಎಂದ ಗೃಹ ಸಚಿವ..! ಪೊಲೀಸರಿಗೆ ಕಮಿಷನ್​ ಕೊಡಲಿಲ್ಲ ಎಂದು ಅರೆಸ್ಟ್ ಮಾಡಿದ್ದಾರೆ ಎಂದ ಸ್ಥಳೀಯರು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget