ವೈರಲ್ ನ್ಯೂಸ್ಶಿಕ್ಷಣ

ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ

218

ನ್ಯೂಸ್‌ ನಾಟೌಟ್‌ : ಸಿಬಿಎಸ್‌ಇ’ಯು 19ನೇ ಆವೃತ್ತಿಯ ಸೆಂಟ್ರಲ್‌ ಟೀಚರ್ ಎಲಿಜಿಬಿಲಿಟಿ ಟೆಸ್ಟ್‌ (CTET) ನೋಟಿಫಿಕೇಶನ್‌ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.2024ನೇ ಸಾಲಿನ ಜುಲೈ ಸೆಷನ್‌ ಸಿಟಿಇಟಿ ಪರೀಕ್ಷೆಯನ್ನು ದಿನಾಂಕ 07-07-2024 ರಂದು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ.

2024ನೇ ಸಾಲಿನ ಜುಲೈ ಸೆಷನ್‌ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಒಟ್ಟು 20 ಭಾಷೆಗಳಲ್ಲಿ 136 ಸಿಟಿಗಳಲ್ಲಿ ದೇಶದಾದ್ಯಂತ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು ನಡೆಸುವುದಾಗಿ ತಿಳಿಸಿದೆ.ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 07-03-2024 ಮತ್ತು ಆನ್‌ಲೈನ್‌ ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ: 02-04-2024 ರ ರಾತ್ರಿ 11-59 ಗಂಟೆವರೆಗೆ. ಸಿಟಿಇಟಿ 2024 ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 02-04-2024 ರ ರಾತ್ರಿ 11-59 ಗಂಟೆವರೆಗೆ.ವಿದ್ಯಾರ್ಹತೆ : ಯಾವುದೇ ಪದವಿ ಜತೆಗೆ ಬಿ.ಇಡಿ, ಬಿಪಿ.ಇಡಿ (ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ) ಪಾಸ್‌ ಮಾಡಿರಬೇಕು.

ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್‌ ಓದಿರಿ.ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.1000. (2 ಪೇಪರ್‌ಗಳಿಗೆ ರೂ.1200) ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1000. (2 ಪೇಪರ್‌ಗಳಿಗೆ ರೂ.1200) ಹಾಗು SC / ST / ಅಂಗವಿಕಲ ಅಭ್ಯರ್ಥಿಗಳಿಗೆ ರೂ.500. (2 ಪೇಪರ್‌ಗಳಿಗೆ ರೂ.600) ಎಂದು ನಿರ್ಧರಿಸಲಾಗಿದೆ.ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಹಾಕಲು https://ctet.nic.in/ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.ಸಿಇಟಿ ಪರೀಕ್ಷೆಯನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು 2024 ರ ಜುಲೈ 07 ರಂದು ನಡೆಸಲಿದ್ದು, ಪರೀಕ್ಷೆ ಶಿಫ್ಟ್‌ ಸಮಯವನ್ನು ಸಿಟಿಇಟಿ ಪ್ರವೇಶ ಪತ್ರದಲ್ಲಿ ಚೆಕ್‌ ಮಾಡಿಕೊಳ್ಳಬಹುದು. ಸಿಟಿಇಟಿ ಪೇಪರ್-2 ಪರೀಕ್ಷೆ ಬೆಳಿಗ್ಗೆ 9-15 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ನಡೆಯಲಿದೆ. ಪೇಪರ್-1 ಪರೀಕ್ಷೆಯು ಮಧ್ಯಾಹ್ನ 02-15 ಗಂಟೆಗೆ ಆರಂಭವಾಗಿ 05-00 ಗಂಟೆಗೆ ಕೊನೆಗೊಳ್ಳಲಿದೆ ಎಂದು ವರದಿ ತಿಳಿಸಿದೆ.

See also  ದಾಳಿಗೆ ಪಾಕಿಸ್ತಾನ ಸುಮಾರು 300 ರಿಂದ 400 ಡ್ರೋನ್‌ ಗಳನ್ನು ಬಳಸಿದೆ ಎಂದ ಕರ್ನಲ್ ಸೋಫಿಯಾ ಖುರೇಷಿ..! ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸುದ್ದಿಗೋಷ್ಠಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget