ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಹಲವಾರು ಯೋಧರ ಪ್ರಾಣ ರಕ್ಷಿಸಿದ ಸಿಆರ್ ಪಿಎಫ್ ಶ್ವಾನ..! ನಕ್ಸಲ್ ಚಟುವಟಿಕೆ ವೇಳೆ ಐಇಡಿ ಸ್ಫೋಟ, ಗಂಭೀರ ಗಾಯಗೊಂಡ ಶ್ವಾನಕ್ಕೆ ಚಿಕಿತ್ಸೆ

ನ್ಯೂಸ್ ನಾಟೌಟ್: ಹಲವಾರು ಯೋಧರ ಪ್ರಾಣವನ್ನು ರಕ್ಷಿಸಿದ ಶ್ವಾನವೊಂದು ಐಇಡಿ ಸ್ಫೋಟದ ವೇಳೆ ಗಂಭೀರ ಗಾಯಗೊಂಡು ಜೀವನ್ಮರಣದ ಸ್ಥಿತಿಯಲ್ಲಿದೆ.

ಭಾರತೀಯ ಸೇನೆಯಲ್ಲಿರುವ ಶ್ವಾನಕ್ಕೆ ಯೋಧರಷ್ಟೇ ಧೈರ್ಯ, ಕಾಳಜಿ ಎಲ್ಲವೂ ಇರುತ್ತದೆ. ಯೋಧರಂತೆಯೇ ಏನಾದರೂ ಅವಘಡ ಸಂಭವಿಸಿದಾಗ ಅವರನ್ನು ರಕ್ಷಿಸಲು ಧಾವಿಸುತ್ತವೆ, ಅದಕ್ಕಾಗಿ ವಿಶೇಷ ತರಬೇತಿಯನ್ನು ನೀಡಿರುತ್ತಾರೆ. ಹಾಗೆಯೇ ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಐಇಡಿ ಸ್ಫೋಟಗೊಂಡಿತ್ತು. ಸ್ಫೋಟದ ವೇಳೆ ಸೈನಿಕರ ಜೊತೆಗಿದ್ದ ಸಿಆರ್ ಪಿಎಫ್ ಶ್ವಾನ ಗಂಭೀರವಾಗಿ ಗಾಯಗೊಂಡಿದೆ.

ನಕ್ಸಲ್ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ 229 ನೇ ಬೆಟಾಲಿಯನ್‌ನ ‘ಆಲ್ಫಾ’ ಕಂಪನಿಯ ಸೈನಿಕರ ಜೀವವನ್ನು ನಾಯಿ ರಕ್ಷಿಸಿದೆ.

ಫೆಬ್ರವರಿ 2023 ರಲ್ಲಿ, ರಾಜ್ಯದ ನಾರಾಯಣಪುರ ಜಿಲ್ಲೆಯಲ್ಲಿ ನಾಯಿಯೊಂದು ತನ್ನ ಪ್ರಾಣವನ್ನು ತ್ಯಾಗ ಮಾಡಿ ಅನೇಕ ಸೈನಿಕರನ್ನು ಸಾವಿನಿಂದ ರಕ್ಷಿಸಿತ್ತು.

Related posts

ಕುತ್ತಾರು ಕೊರಗಜ್ಜನ ಕೋಲದಲ್ಲಿ ಕತ್ರಿನಾ ಕೈಫ್‌, ಕೆ.ಎಲ್‌ ರಾಹುಲ್‌ ಭಾಗಿ, ಹರಕೆ ತೀರಿಸಿದ 9 ಮಂದಿ ಸೆಲೆಬ್ರಿಟಿಗಳು..!

ಕೆಲವೇ ಸೆಕೆಂಡ್​ನಲ್ಲಿ ಲಕ್ಷಾಧಿಪತಿಯಾದ ಯುವಕನಿಗೆ 94 ಲಕ್ಷ ಸಿಕ್ಕಿದ್ದು ಹೇಗೆ? ಹೀರೋ ಆಗಬೇಕಿದ್ದವ ಆ ಒಂದು ನಿರ್ಧಾರದಿಂದ ಆರೋಪಿಯಾಗಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ!

ಕೈ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ನಾಮಪತ್ರ ಸಲ್ಲಿಕೆ..! ಶಿವರಾಜ್ ಕುಮಾರ್ ಜೊತೆಗೆ ಸಿಗಂದೂರು ಚೌಡೇಶ್ವರಿಯ ದರ್ಶನ