ನ್ಯೂಸ್ ನಾಟೌಟ್: ಮನುಷ್ಯರಂತೆ ಮಾತಾಡೋ ಕಾಗೆಯನ್ನು ನೋಡಿ ಸ್ಥಳೀಯರು, ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಾಗೆಯೊಂದು ಮನುಷ್ಯರಂತೆ ಮಾತಾಡೋ ವಿಡಿಯೋ ವೈರಲ್ ಆಗಿದೆ.
ಇದೇ ವಿಡಿಯೋದಲ್ಲಿ ಕಾಗೆ ಪಪ್ಪಾ ಐ ಲವ್ ಯೂ, ಪಪ್ಪಾ ಪಪ್ಪಾ, ಪಪ್ಪಾ ಬಾರೋ ಅಂತೆಲ್ಲಾ ಮಾತಾಡುವ ರೀತಿಯಲ್ಲಿ ಕೇಳುತ್ತದೆ. ನೋಡಿದ ಸ್ಥಳೀಯರು ಅಚ್ಚರಿಯಾಗಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಡಾ ಭಾಗದಲ್ಲಿ ಮಹಿಳೆಯೊಬ್ಬರು ಸಾಕಿದ ಕಾಗೆಯೇ ಮನುಷ್ಯನಂತೆ ಮಾತಾಡಿದೆ.
View this post on Instagram
ತನುಜಾ ಮುಕ್ನೆ ಎಂಬ ಮಹಿಳೆ ಮೂರು ವರ್ಷಗಳ ಹಿಂದೆ ತನ್ನ ತೋಟದಲ್ಲಿ ಬಿದ್ದಿದ್ದ ಕಾಗೆಯನ್ನು ಆರೈಕೆ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ತನುಜಾ ಅವರ ಮನೆಯಲ್ಲಿ ಸದಸ್ಯನ ಹಾಗೇ ಈ ಕಾಗೆ ಕುಟುಂಬದವರೊಂದಿಗೆ ಮನುಷ್ಯರ ಜೊತೆಗೆ ಸಂವಹನ ನಡೆಸುತ್ತದೆ. ಇದು ಸ್ಥಳೀಯರ ಹಾಗೂ ತಜ್ಞರಲ್ಲಿ ಕುತೂಹಲ ಹುಟ್ಟುಹಾಕಿದೆ. ಇದರ ಸತ್ಯಾಸತ್ಯತೆಯ ಬಗ್ಗೆ ಸ್ಪಷ್ಟತೆ ದೊರಕಿಲ್ಲ.
ಇದನ್ನೂ ಓದಿ: ಮಂಗಳೂರು ಡಿಸಿಸಿ ಬ್ಯಾಂಕ್ ಗೆ ಆರ್ ಬಿಐ ನಿಂದ ಶಾಕ್..! 5 ಲಕ್ಷ ರೂ. ದಂಡ..!
108 ವರ್ಷದ ವರ, 98 ವರ್ಷದ ವಧುಗೆ ಮದುವೆ..! ಯುವಕರೇ ನಾಚುವಂತಿದೆ ಈ ಜೋಡಿ