ಕರಾವಳಿಕ್ರೈಂ

ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್ ತಿಂದು ಮೊಸಳೆ ಸಾವು..! ಮರಣೋತ್ತರ ಪರೀಕ್ಷೆ ವೇಳೆ ಹೊಟ್ಟೆಯಲ್ಲಿ ಸಿಕ್ಕಿತು 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್..!

ನ್ಯೂಸ್ ನಾಟೌಟ್: ಕೋಳಿ ತ್ಯಾಜ್ಯ ತುಂಬಿದ ಚೀಲ, ಮಕ್ಕಳಿಗೆ ಬಳಸುವ ಪ್ಯಾಡ್ ತಿಂದು ವಿಲವಿಲ ಒದ್ದಾಡಿ ಮೊಸಳೆಯೊಂದು ಕುಮಾರಧಾರ ನದಿಯಲ್ಲಿ ಮೃತಪಟ್ಟಿದೆ. ಮೊಸಳೆಯ ಅನುಮಾನಸ್ಪದ ಸಾವಿನ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸುವ ವೇಳೆ ಉತ್ತರ ಸಿಕ್ಕಿದೆ. ಈ ವೇಳೆ ಹೊಟ್ಟೆಯೊಳಗೆ 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ಹಾಗೂ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ.

ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು ಸೇತುವೆ ಕೆಳಭಾಗದ ಕುಮಾರಧಾರ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಏನೆಕಲ್ಲು ನರ್ಸರಿ ಪ್ರದೇಶದಲ್ಲಿ ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್ ಮೊಸಳೆಯ ಹೊಟ್ಟೆಯಲ್ಲಿ ಜೀರ್ಣಗೊಳ್ಳದೆ ಅಸೌಖ್ಯಗೊಂಡು ಸಾವಿಗೀಡಾಗಿದೆ ಎಂದು ತಿಳಿದು ಬಂದಿದೆ. ನಾಲ್ಕು ವರ್ಷದ ಹೆಣ್ಣು ಮೊಸಳೆ ಎಂದು ಹೇಳಲಾಗುತ್ತಿದೆ.

Related posts

H3N2 Virus: ಆತಂಕ ಸೃಷ್ಟಿಸಿರುವ ಹೆಚ್‌3ಎನ್‌2 ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ !

ಕುಟುಂಬಸ್ಥರ ಕಣ್ಣೆದುರೇ ಜಲಸಮಾಧಿಯಾದ ವಿದ್ಯಾರ್ಥಿಗಳು..! ರಷ್ಯಾದಲ್ಲಿ 4 ಭಾರತೀಯ ವಿದ್ಯಾರ್ಥಿಗಳ ದುರಂತ ಅಂತ್ಯ..!

ದೆಹಲಿಗೆ ನೂತನ ಸಿಎಂ ಹೆಸರು ಪ್ರಸ್ತಾಪಿಸಿದ ಕೇಜ್ರಿವಾಲ್‌..! ಅತಿಶಿ ರಾಷ್ಟ್ರ ರಾಜಧಾನಿಗೆ ಹೊಸ ಮುಖ್ಯಮಂತ್ರಿ..!